ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್​ ಗಾಂಧಿ ಇನ್ನಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಮಹಾತ್ಮ ಗಾಂಧಿಯವರ ಮೊಮ್ಮಗ ಅರುಣ್‌ ಗಾಂಧಿ ನಿಧನರಾಗಿದ್ದಾರೆ. 89 ವರ್ಷದ ಅರುಣ್‌ ಗಾಂಧಿ ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಅರುಣ್‌ ಗಾಂಧಿ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಅರುಣ್‌ ಗಾಂಧಿಯವರ ಅಂತ್ಯ ಸಂಸ್ಕಾರ ಕೊಲ್ಲಾಪುರದಲ್ಲಿ ಇಂದು ನಡೆಯಲಿದೆ ಎಂದು ಅವರ ಪುತ್ರ ತುಷಾರ್‌ ಗಾಂಧಿ ಮಾಹಿತಿ ನೀಡಿದ್ದಾರೆ.

ಮಹಾತ್ಮ ಗಾಂಧಿಯವರ ಪುತ್ರ ಮಣಿಲಾಲ್‌ ಗಾಂಧಿ ಹಾಗೂ ಸುಶೀಲ ದಂಪತಿಯ ಪುತ್ರನಾಗಿ ಏಪ್ರಿಲ್‌ 14,1934ರಲ್ಲಿ ದಕ್ಷಿಣ ಆಫ್ರಿಕಾದ ಡರ್ನಾನ್‌ ನಲ್ಲಿ ಅರುಣ್‌ ಗಾಂಧಿ ಜನಿಸಿದ್ದರು. ಅವರ ತಾತ ಮಹಾತ್ಮ ಗಾಂಧಿಯವರ ಹಾದಿಯಲ್ಲಿ ನಡೆದಿದ್ದ ಅರುಣ್‌ ಗಾಂಧಿ ಸಮಾಜಿಕ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!