ಭಾರತ್ ಜೋಡೋದಲ್ಲಿ ರಾಹುಲ್‌ ಗಾಂಧಿ ಜೊತೆಗೆ ಹೆಜ್ಜೆ ಹಾಕಿದ ಗಾಂಧಿ ಮೊಮ್ಮಗ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ಇಂದು ಬೆಳಗ್ಗೆ ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿಯವರೊಂದಿಗೆ ಹೆಜ್ಜೆ ಹಾಕಿದ್ದಾರೆ. ಅವರ ಭಾಗವಹಿಸುವಿಕೆ “ಐತಿಹಾಸಿಕ” ಎಂದು ಕಾಂಗ್ರೆಸ್ ಬಣ್ಣಿಸಿದೆ.
ನವೆಂಬರ್ 7 ರಿಂದ ಮಹಾರಾಷ್ಟ್ರದ ಮೂಲಕ ಹಾದುಹೋಗುತ್ತಿರುವ ಯಾತ್ರೆಯು ಅಕೋಲಾ ಜಿಲ್ಲೆಯ ಬಾಲಾಪುರದಿಂದ ಶುಕ್ರವಾರ ಬೆಳಿಗ್ಗೆ 6 ರ ಸುಮಾರಿಗೆ ದಿನದ ಪ್ರಯಾಣವನ್ನು ಆರಂಭಿಸಿ ಕೆಲವು ಗಂಟೆಗಳ ಬಳಿಕ ಶೆಗಾಂವ್ ತಲುಪಿತು. ಅಲ್ಲಿ ಲೇಖಕ ಮತ್ತು ಕಾರ್ಯಕರ್ತ ತುಷಾರ್ ಗಾಂಧಿ ಯಾತ್ರೆಯನ್ನು ಕೂಡಿಕೊಂಡರು.
ಗುರುವಾರ ಟ್ವೀಟ್ ನಲ್ಲಿ ತುಷಾರ್ ಗಾಂಧಿ ಶೇಗಾಂವ್ ತನ್ನ ಜನ್ಮಸ್ಥಳ ಎಂದು ಹೇಳಿದ್ದರು. ”18 ರಂದು ಶೇಗಾಂವ್‌ನಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತೇನೆ. ಶೇಗಾಂವ್ ನನ್ನ ಜನ್ಮಸ್ಥಳವೂ ಹೌದುʼ ಎಂದು ಅವರು ಪೋಸ್ಟ್‌ನಲ್ಲಿ ಹೇಳಿದ್ದರು.
ತುಷಾರ್ ಗಾಂಧಿ ಯಾತ್ರೆಯಲ್ಲಿ ಭಾಗವಹಿಸಿದ್ದು ಐತಿಹಾಸಿಕ ಎಂದು ಕಾಂಗ್ರೆಸ್ ಬಣ್ಣಿಸಿದೆ. ಜವಾಹರಲಾಲ್ ನೆಹರು ಮತ್ತು ಮಹಾತ್ಮ ಗಾಂಧಿಯವರ ಮರಿ ಮೊಮ್ಮಕ್ಕಳಾದ ರಾಹುಲ್ ಗಾಂಧಿ ಮತ್ತು ತುಷಾರ್ ಗಾಂಧಿಯವರು ಇಬ್ಬರು ದಿವಂಗತ ನಾಯಕರ ಪರಂಪರೆಯ ವಾಹಕಗಳು ಎಂದು ಪಕ್ಷ ಬಣ್ಣಿಸಿದೆ.
“ಇಬ್ಬರು ಒಟ್ಟಿಗೆ ನಡೆಯುವುದು ಪ್ರಸ್ತು ಅಧಿಕಾರದಲ್ಲಿರುವ ಆಡಳಿತಗಾರರಿಗೆ ಸಂದೇಶವಾಗಿದೆ. ಅವರು ಪ್ರಜಾಪ್ರಭುತ್ವವನ್ನು ಅಪಾಯಕ್ಕೆ ಸಿಲುಕಿಸಬಹುದು ಆದರೆ ಅದನ್ನು ಮುಗಿಸಲು ಬಿಡುವುದಿಲ್ಲ” ಎಂದು ಪಕ್ಷವು ಹೇಳಿಕೆಯಲ್ಲಿ ತಿಳಿಸಿದೆ.
ರಾಹುಲ್ ಗಾಂಧಿ ಇಂದು ಸಂಜೆ ಶೇಗಾಂವ್‌ನಲ್ಲಿ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ್ ಜೋಡೋ ಯಾತ್ರೆಯು ಮಹಾರಾಷ್ಟ್ರದಲ್ಲಿ ಕೊನೆಯ ಹಂತದಲ್ಲಿದ್ದು, ನವೆಂಬರ್ 20 ರಂದು ಮಧ್ಯಪ್ರದೇಶವನ್ನು ಪ್ರವೇಶಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!