ಹೊಸದಿಗಂತ ಡಿಜಿಟಲ್ ಡೆಸ್ಕ್:
ಟಾಲಿವುಡ್ ಸೂಪರ್ ಸ್ಟಾರ್, ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಷ್ಟೇ ಅಲ್ಲ, ನಿಜ ಜೀವನದಲ್ಲೂ ಹೀರೋ ಆಗಿದ್ದಾರೆ. ಸಾವಿರಾರು ಮಕ್ಕಳ ಪಾಲಿಗೆ ದೇವರು ಆಗಿದ್ದಾರೆ ಎಂದರೂ ಸಹ ತಪ್ಪಾಗಲಿಕ್ಕಿಲ್ಲ. ತಮ್ಮ ಮಹೇಶ್ ಬಾಬು ಫೌಂಡೇಷನ್ ಮೂಲಕ ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಸ್ವಂತ ಹಣದಿಂದ ಹೃದಯ ಸರ್ಜರಿ ಮಾಡಿಸುತ್ತಿದ್ದಾರೆ.
ಮಹೇಶ್ ಬಾಬು ಫೌಂಡೇಶನ್ ಹಾರ್ಟ್ ತೊಂದರೆಯಿಂದ ಬಳಲುತ್ತಿರುವ ಮಕ್ಕಳನ್ನು ಹುಡುಕಿ ಚಿಕಿತ್ಸೆ ಕೊಡಿಸುತ್ತಾರೆ. ಈ ನಿಟ್ಟಿನಲ್ಲಿ ಆಂಧ್ರಾ ಆಸ್ಪತ್ರೆ ಜೊತೆ ಸೇರಿ ಮಹೇಶ್ ಬಾಬು ಒಂದು ದಿನದಲ್ಲಿ ಸುಮಾರು ಮೂವತ್ತು ಮಕ್ಕಳಿಗೆ ಹೃದಯ ಸರ್ಜರಿ ಮಾಡಿಸಿದ್ದಾರೆ. ಈ ಎಲ್ಲಾ ಸಾಮಾಜಿಕ ಕಳಕಳಿ ಕೆಲಸವನ್ನು ಅವರ ಪತ್ನಿ ನಮ್ರತಾ ನೋಡಿಕೊಳ್ಳುತ್ತಿದ್ದು, ಈ ವಿಚಾರವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ