Monday, August 15, 2022

Latest Posts

ಕಾಂಗ್ರೆಸ್ ವೇದಿಕೆ ಬ್ಯಾನರ್ ನಲ್ಲಿ ಮಹಿಳಾ ಅಧ್ಯಕ್ಷೆ‌‌‌ ರಕ್ಷಿತಾ ಈಟಿ‌ ಭಾವಚಿತ್ರ‌ ಮಾಯ

ಹೊಸದಿಗಂತ ವರದಿ, ಬಾಗಲಕೋಟೆ:

ನಗರದ ಚರಂತಿಮಠದ ಸಭಾಭವನದಲ್ಲಿ ಸೋಮವಾರ ನಡೆದ ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಬಾಗಲಕೋಟೆ ಮತಕ್ಷೇತ್ರದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು, ಸದಸ್ಯರಿಗೆ ಆಯೋಜಿಸಿದ್ದ‌ ಸನ್ಮಾನ ಸಮಾರಂಭದಲ್ಲಿ ವೇದಿಕೆಯ ಬ್ಯಾನರದಲ್ಲಿ‌ ಮಹಿಳಾ ಘಟಕದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ರಕ್ಷಿತಾ ಭರತಕುಮಾರ ಈಟಿಯವರ ಭಾವಚಿತ್ರ ಇರದೇ ಇರುವುದು ಚರ್ಚೆಗೆ ಗ್ರಾಸವಾಗಿತ್ತು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿ.ಪಂ ಸದಸ್ಯೆ ಹಾಗೂ ರಾಜ್ಯ ಮಹಿಳಾ‌ ಘಟಕದ ಪದಾಧಿಕಾರಿ ವೀಣಾ ಕಾಶಪ್ಪನವರ ಭಾವಚಿತ್ರ ಹೊರತುಪಡಿಸಿದರೆ ಮಹಿಳಾ‌ ಘಟಕದ ಜಿಲ್ಲಾ ಅಧ್ಯಕ್ಷೆಯ ಚಿತ್ರ ಯಾಕೆ ವೇದಿಕೆಯ ಬ್ಯಾನರದಲ್ಲಿ‌ ಕಾಣಿಸಿಲ್ಲ ಎಂಬುದು ಚರ್ಚಿತ ವಿಷಯವಾಗಿ ಮಾರ್ಪಟ್ಟಿತು.

ಇತ್ತೀಚಿಗೆ ಅವರ ಭಾವಚಿತ್ರ ಬ್ಯಾನರದಲ್ಲಿ‌ ಮಾಯವಾಗುತ್ತಿರುವುದರಿಂದ‌ ಅವರನ್ನು ಪಕ್ಷದಲ್ಲಿ‌ ಸೈಡಲೈನ್ ಮಾಡುವ ಕೆಲಸ‌ ನಡೆಯುತ್ತಿದೆಯಾ ಎಂದು‌ ಕೆಲವು ಪಕ್ಷದ ಕಾರ್ಯಕರ್ತರು ಮಾತನಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss