Monday, August 15, 2022

Latest Posts

ಮಾಜಾಳಿ ಕಡಲ ತೀರದಲ್ಲಿ ಟೈಗರ್ ಶಾರ್ಕ್ ನ ಕಳೇಬರ ಪತ್ತೆ

ಹೊಸ ದಿಗಂತ ವರದಿ, ಕಾರವಾರ:

ಇಲ್ಲಿನ ಮಾಜಾಳಿ ಕಡಲ ತೀರದಲ್ಲಿ ಅಪರೂಪದ ಟೈಗರ್ ಶಾರ್ಕ್ ಜಾತಿಗೆ ಸೇರಿದ ಮೀನಿನ ಕಳೇಬರ ಪತ್ತೆಯಾಗಿದೆ.
ಸುಮಾರು 2 ಮೀಟರ್ ಉದ್ದ ಹಾಗೂ 30 ಕೆ.ಜಿ ಭಾರ ಇರುವ ಹೆಣ್ಣು ಟೈಗರ್ ಶಾರ್ಕ್ ಯಾವ ಕಾರಣದಿಂದ ಮೃತ ಪಟ್ಟಿದೆ ಎಂದು ತಿಳಿದು ಬಂದಿಲ್ಲ.
ಮತ್ಸ್ಯಲೋಕದ ಅತ್ಯಂತ ಬಲಿಷ್ಠ ಮೀನು ಎಂದು ಗುರುತಿಸಿಕೊಂಡಿರುವ ಟೈಗರ್ ಶಾರ್ಕ್ 6 ಮೀಟರ್ ಉದ್ದ 600 ಕೆ.ಜಿ ಭಾರಗಳ ವರೆಗೆ ಬೆಳೆದು ತಿಮಿಂಗಿಲ ಸೇರಿದಂತೆ ಇನ್ನಿತರ ಜಲಚರಗಳು ಹಾಗೂ ಕೆಲವೊಮ್ಮೆ ಮನುಷ್ಯರ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರೀ ಬೇಡಿಕೆ ಇರುವ ಅಳಿವಿನಂಚಿನಲ್ಲಿರುವ ಈ ಶಾರ್ಕ್ ಪ್ರಭೇದಕ್ಕೆ ಸ್ಥಳೀಯವಾಗಿ ಬೇಡಿಕೆ ಇಲ್ಲ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss