ಬೃಹತ್‌ ವಿರೋಧ ಪಕ್ಷ ಸಭೆ ಮುಂದೂಡಿಕೆ: ಜೂ.23ರಂದು ನಿಗದಿ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಾಟ್ನಾದಲ್ಲಿ ಜೂ.12ರಂದು ನಡೆಯಬೇಕಿದ್ದ ಬೃಹತ್ ವಿರೋಧ ಪಕ್ಷದ ಸಭೆಯು ಜೂನ್ 23ರಂದು ಮುಂದೂಡಲಾಗಿದೆ. ಕಾಂಗ್ರೆಸ್ ಮತ್ತು ಅದರ ತಮಿಳುನಾಡು ಮಿತ್ರಪಕ್ಷವಾದ ಡಿಎಂಕೆ ಮನವಿಯ ಬಳಿಕ ಹಾಗೂ ಕಾಂಗ್ರೆಸ್‍ನ ರಾಹುಲ್ ಗಾಂಧಿ ಗೈರುಹಾಜರಿಯ ಹಿನ್ನೆಲೆ ಈ ಬದಲಾವಣೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.

ರಾಹುಲ್ ಗಾಂಧಿ ಅವರು ಸದ್ಯ ಅಮೆರಿಕ ಪ್ರವಾಸದಲ್ಲಿದ್ದು, ಜೂನ್ 15ರಂದು ಹಿಂದಿರುಗುವ ನಿರೀಕ್ಷೆಯಿದೆ. ಅವರ ತಾಯಿ ಸೋನಿಯಾ ಗಾಂಧಿ ಕೂಡ ವೈದ್ಯಕೀಯ ಕಾರಣಗಳಿಗೆ ವಿದೇಶದಲ್ಲಿದ್ದಾರೆ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆಯಲ್ಲಿದ್ದಾರೆ.

ಡಿಎಂಕೆ ಕೂಡ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಭಾಗವಹಿಸಬೇಕಾದ ಸರ್ಕಾರಿ ಕಾರ್ಯಕ್ರಮ ಇರುವುದರಿಂದ ಸಭೆಯನ್ನು ಮುಂದೂಡಬೇಕೆಂದು ಬಯಸಿದೆ.

2024 ರಲ್ಲಿ ಬಿಜೆಪಿಯನ್ನು ಎದುರಿಸಲು ಪ್ರತಿಪಕ್ಷಗಳನ್ನು ಒಟ್ಟುಗೂಡಿಸಲು ಸ್ವಯಂಪ್ರೇರಿತ ಮುಂದಾಳತ್ವ ವಹಿಸಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಇಚ್ಛೆಯ ಮೇರೆಗೆ ಪಾಟ್ನಾದಲ್ಲಿ ಸಭೆ ನಡೆಯುತ್ತಿದೆ. ಕಳೆದ ತಿಂಗಳು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ ನಂತರ ಈ ದಿನಾಂಕವನ್ನು ನಿರ್ಧರಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!