Monday, October 2, 2023

Latest Posts

ಟ್ರಾಕ್ಟರ್‌ ಚಾಲಕನ ನಿರ್ಲಕ್ಷ್ಯ: ಸ್ವಲ್ಪದರಲ್ಲಿ ತಪ್ಪಿತು ನವದೆಹಲಿ-ಭುವನೇಶ್ವರ ಎಕ್ಸ್‌ಪ್ರೆಸ್‌ ಅಪಘಾತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಾರ್ಖಂಡ್ ರಾಜ್ಯದಲ್ಲಿ ಮತ್ತೊಂದು ದೊಡ್ಡ ರೈಲು ಅಪಘಾತವನ್ನು ತಪ್ಪಿಸಲಾಗಿದೆ. ಮಂಗಳವಾರ ರಾತ್ರಿ, ನವದೆಹಲಿ-ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ (ಟ್ರೇನ್ ನಂ. 22812) ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್ ಬಳಿ ಸಂಚರಿಸುವಾಗ ಇದ್ದಕ್ಕಿದ್ದಂತೆ ರೈಲ್ವೆ ಗೇಟ್‌ಗೆ ಟ್ರಾಕ್ಟರ್‌ ಡಿಕ್ಕಿ ಹೊಡೆದಿದೆ. ಭೋಜುಡಿಹ್ ರೈಲು ನಿಲ್ದಾಣದ ಬಳಿಯ ಸಂತಾಲ್ದಿಹ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ಘಟನೆ ನಡೆದಿದೆ.

ಟ್ರಾಕ್ಟರ್ ರೈಲು ಹಳಿ ಮತ್ತು ಗೇಟ್ ನಡುವೆ ಸಿಲುಕಿಕೊಂಡಿತು. ರೈಲ್ವೆ ಕ್ರಾಸಿಂಗ್‌ನಲ್ಲಿ ರೈಲ್ವೆ ಗೇಟ್ ಮುಚ್ಚುವಾಗ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದೆ. ಆದರೆ, ರೈಲು ಚಾಲಕ ಬ್ರೇಕ್ ಹಾಕಿದ್ದರಿಂದ ದೊಡ್ಡ ರೈಲು ಅಪಘಾತ ತಪ್ಪಿತು ಎಂದು ಆಗ್ನೇಯ ರೈಲ್ವೆಯ ಆದ್ರಾ ವಿಭಾಗದ ಡಿಆರ್‌ಎಂ ಮನೀಶ್‌ ಕುಮಾರ್‌ ತಿಳಿಸಿದ್ದಾರೆ. ಈ ಘಟನೆಯಿಂದ ರೈಲು 45 ನಿಮಿಷ ತಡವಾಯಿತು.

ಟ್ರ್ಯಾಕ್ಟರ್ ವಶಪಡಿಸಿಕೊಂಡು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಗೇಟ್ ಮ್ಯಾನ್ ಅಮಾನತು ಮಾಡಲಾಗಿದೆ ಎಂದು ತಿಳಿಸಿದರು. ಟ್ರಾಕ್ಟರ್ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ. ಒಡಿಶಾ ಅಪಘಾತದಲ್ಲಿ 288 ಮಂದಿ ಪ್ರಾಣ ಕಳೆದುಕೊಂಡು 1100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಇದಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಘಟನೆಗಳು ನಡೆಯುತ್ತಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!