Sunday, April 18, 2021

Latest Posts

ತೊಗರಿ ಬೇಳೆ ಬೇಯಿಸಿದ ನೀರನ್ನು ಚೆಲ್ತೀರಾ? ಇನ್ಮುಂದೆ ಆ ನೀರಿನಿಂದ ರುಚಿಯಾದ ತಿಳಿ ಸಾರು ಮಾಡಿ… ಇಲ್ಲಿದೆ ರೆಸಿಪಿ

ತೊಗರಿ ಬೇಳೆ ಬೇಯಿಸಿದ ನೀರು ಏನಕ್ಕೂ ಉಪಯೋಗವಿಲ್ಲವೆಂದು ಚೆಲ್ಲುತ್ತೇವೆ. ಇನ್ಮುಂದೆ ಈ ತಪ್ಪನ್ನು ಮಾಡಬೇಡಿ. ಏಕಂದ್ರೆ ತೊಗರಿ ಬೇಳೆ ನೀರಿನಿಂದ ರುಚಿಯಾದ ತಿಳಿ ಸಾರು ಮಾಡಬಹುದು. ಹೇಗೆ ಗೊತ್ತಾ? ಇಲ್ಲಿದೆ ನೋಡಿ ರೆಸಿಪಿ..

ಬೇಕಾಗುವ ಸಾಮಗ್ರಿ:

ತೊಗರಿ ಬೇಳೆ ಬೇಯಿಸಿದ ನೀರು
ಕೊತ್ತಂಬರಿ ಸೊಪ್ಪು
ಎಣ್ಣೆ
ಉಪ್ಪು
ಲಿಂಬು
ಟೊಮಾಟೊ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಸಾಸಿವೆ
ಇಂಗು
ಅರಿಶಿಣ
ಹಸಿಮೆಣಸು
ಕರಿ ಬೇವಿನ ಸೊಪ್ಪು

ಮಾಡುವ ವಿಧಾನ:

  • ಮೊದಲಿಗೆ ಎಣ್ಣೆಯನ್ನು ಕಾಯಲು ಇಡಿ.
  • ಎಣ್ಣೆ ಕಾದ ನಂತರ ಅದಕ್ಕೆ ಹೆಚ್ಚಿಕೊಂಡ ಹಸಿ ಮೆಣಸು, ಸಾಸಿವೆ, ಅರಿಶಿಣ, ಜೀರಿಗೆ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
  • ಚೆನ್ನಾಗಿ ಫ್ರೈ ಆದ ನಂತರ ಹೆಚ್ಚಿಕೊಂಡ ಟೊಮಾಟೋ, ಈರುಳ್ಳಿ, ಬೇವಿನ ಸೊಪ್ಪು ಹಾಕಿ ಮತ್ತೆ ಫ್ರೈ ಮಾಡಿ.
  • ಫ್ರೈ ಆದ ನಂತರ ಅದಕ್ಕೆ ತೊಗರಿ ಬೇಳೆ ಬೇಯಿಸಿದ ನೀರು ಹಾಕಿ ಕುದಿಸಿ. ಕುದಿಯುತ್ತಿರುವಾಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿ.
  • ಕೊನೆಯಲ್ಲಿ ಲಿಂಬು ರಸ, ಕೊತ್ತಂಬರಿ ಸೊಪ್ಪು ಹಾಕಿ ಮುಚ್ಚಿಟ್ಟರೆ ತಿಳಿ ಸಾರು ರೆಡಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

spot_imgspot_img

Don't Miss