Monday, August 8, 2022

Latest Posts

ದಿನವೂ ಒಂದೇ ರೀತಿ ಊಟ ತಿಂದು ಬೋರ್ ಆಗ್ತಿದ್ಯಾ? ಊಟಕ್ಕೆ ಈ ಆರೋಗ್ಯಕರ ಕೊಸಂಬರಿ ಮಾಡಿಕೊಳ್ಳಿ… ಇಲ್ಲಿದೆ ರೆಸಿಪಿ

ಬೇಸಿಗೆಯಲ್ಲಿ ದೇಹದ ಉಷ್ಣತೆ ಹೆಚ್ಚಿರುವುದರಿಂದ ಆದಷ್ಟು ತಂಪಗಿನ ಆಹಾರವನ್ನೇ ಸೇವಿಸಬೇಕು. ದಿನವೂ ಊಟಕ್ಕೆ ಆರೋಗ್ಯಕರ ಕೊಸಂಬರಿ ಮಾಡಿಕೊಳ್ಳಿ. ಕ್ಯಾರೆಟ್ ಆರೋಗ್ಯದ ದೃಷ್ಟಿಯಿಂದ ಬಹಳ ಒಳ್ಳೆಯದು. ಜೋಳ ಕೂಡ ಒಳ್ಳೆಯದು.  ಇದನ್ನು ನೇರವಾಗಿ ಸೇವಿಸಲು ಆಗದವರು ಕ್ಯಾರೆಟ್ ಕೊಸಂಬರಿ ಮಾಡಿಕೊಂಡು ಊಟದ ಜೊತೆ ಸೇವಿಸಬಹುದು.  ಕ್ಯಾರೆಟ್ ಕೊಸಂಬರಿ ಮಾಡುವುದು ಬಹಳ ಸರಳ. ಹೀಗೆ ಮಾಡಿ ಕೊಸಂಬರಿ.

ಬೇಕಾಗುವ ಪದಾರ್ಥ:

ಸ್ವೀಟ್ ಕಾರ್ನ್
ಕ್ಯಾರೆಟ್
ಲಿಂಬು
ಉಪ್ಪು
ಹಸಿ ಮೆಣಸು
ಹೆಸರು ಬೇಳೆ

ಮಾಡುವ ವಿಧಾನ:

ಮೊದಲಿಗೆ 5 ಚಮಚ ಹೆಸರು ಬೇಳೆಯನ್ನು 5 ತಾಸು ನೀರಿನಲ್ಲಿ ನೆನೆಸಿಕೊಳ್ಳಿ. ಆನಂತರ 3 ಕ್ಯಾರೆಟ್ ತುರಿದುಕೊಳ್ಳಿ. ಅದಕ್ಕೆ ನೆನೆಸಿಟ್ಟ ಹೆಸರುಬೇಳೆ, ಹೆಚ್ಚಿಕೊಂಡ ಹಸಿಮೆಣಸು, ಬಿಡಿಸಿಕೊಂಡ ಸ್ವೀಟ್ ಕಾರ್ನ್, ಉಪ್ಪು, ಲಿಂಬೆ ರಸ ಹಾಕಿ ಮಿಕ್ಸ್ ಮಾಡಿದರೆ  ಕೊಸಂಬರಿ ರೆಡಿ. ಇದನ್ನು ಊಟದ ಜೊತೆ ಸೇವಿಸಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss