SNACKS | ಪ್ರೋಟೀನ್ ತುಂಬಿರುವ ಬಟಾಣಿ ಚಾಟ್ ಹೀಗೆ ಮಾಡಿ..

ಸ್ಟ್ರೀಟ್ ಫುಡ್ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…  ಯಾರೂ ಬೇಕಾದರೂ ಇಷ್ಟಪಟ್ಟು ತಿನ್ನುತ್ತಾರೆ. ಸಾಯಂಕಾಲದ ಸ್ನ್ಯಾಕ್ಸ್ ಟೈಮ್ ಗೆ ತಿನ್ನಲು ತುಂಬಾ ಚೆನ್ನಾಗಿರುತ್ತದೆ ಹಾಗೂ ಇಂತಹ ಬಟಾಣಿ ಚಾಟ್ ಇದ್ದರೆ ನಮ್ಮ ದೇಹಕ್ಕೆ ಒಳ್ಳೆ ಶಕ್ತಿ ಮತ್ತು ಪ್ರೊಟೀನ್ ಬರುತ್ತದೆ. ಹಾಗಾದರೆ ಹೇಗೆ ಮಾಡುವುದು ತಿಳಿದುಕೊಳ್ಳೋಣ.

ಬೇಕಾಗುವ ಪದಾರ್ಥಗಳು: ತಲಾ 2 ಸಣ್ಣದಾಗಿ ಹೆಚ್ಚಿದ ಈರುಳ್ಳಿ ಮತ್ತು ಟೊಮೆಟೊ, 4 ಟೇಬಲ್ ಚಮಚ ಸಣ್ಣದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು, 4 ಟೇಬಲ್ ಚಮಚ ಸೇವ್, 2 ಟೇಬಲ್ ಚಮಚ ಹುರಿದ ಶೇಂಗಾ.

ಗ್ರೇವಿಗೆ ಬೇಕಾಗುವ ಪದಾರ್ಥಗಳು: 1/2 ಕಪ್ ಒಣ ಬಟಾಣಿ, 1/4 ಕಪ್ ಕಡ್ಲೆಕಾಳು, 1 ಆಲೂಗಡ್ಡೆ, 1/2 ಟೀಸ್ಪೂನ್ ಬಡೆಸೊಂಪು, 1 – 2 ಹಸಿರು ಮೆಣಸು, 4 – 5 ಎಸಳು ಬೆಳ್ಳುಳ್ಳಿ, ಸಣ್ಣ ತುಂಡು ಶುಂಠಿ, 1 ಕತ್ತರಿಸಿದ  ಈರುಳ್ಳಿ, 1 ಕತ್ತರಿಸಿದ ಟೊಮೆಟೊ, 2 ಟೇಬಲ್ ಚಮಚ ಕತ್ತರಿಸಿದ ಕೊತ್ತಂಬರಿ ಸೊಪ್ಪು, 2 ಟೇಬಲ್ ಚಮಚ ಕತ್ತರಿಸಿದ ಪುದೀನ ಸೊಪ್ಪು,  1/2 ಟೀಸ್ಪೂನ್ ಗರಂ ಮಸಾಲಾ ಪುಡಿ,  1/2 ಟೀಸ್ಪೂನ್ ಚಾಟ್ ಮಸಾಲಾ, 1/4 ಟೀಸ್ಪೂನ್ ಮಾವಿನಕಾಯಿ ಪುಡಿ ಅಥವಾ ಹುಣಿಸೆ ರಸ, ನಿಮ್ಮ ರುಚಿಗೆ ತಕ್ಕಂತೆ ಉಪ್ಪು, 1 ಟೀಸ್ಪೂನ್ ಎಣ್ಣೆ.

ಬಟಾಣಿ ಚಾಟ್ ಮಾಡುವ ವಿಧಾನ:

ಬಟಾಣಿ ಮತ್ತು ಕಡ್ಲೆಕಾಳನ್ನು  ರಾತ್ರಿಯಿಡಿ ನೆನೆಸಿಡಿ. ನೆನೆಸಿದ ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿಕೊಳ್ಳಿ. ಆಲೂಗಡ್ಡೆಯನ್ನು ಪುಡಿಮಾಡಿಕೊಳ್ಳಿ. ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ, ಬಡೆಸೋಂಪನ್ನು ಹುರಿಯಿರಿ. ಹೆಚ್ಚಿದ ಹಸಿಮೆಣಸಿನಕಾಯಿ, ಶುಂಠಿ ಮತ್ತು ಬೆಳ್ಳುಳ್ಳಿಯನ್ನು ಸೇರಿಸಿ ಹುರಿಯಿರಿ. ನಂತರ ಈರುಳ್ಳಿ ಸೇರಿಸಿ ಹುರಿಯಿರಿ. ಟೊಮೇಟೊ ಹಾಕಿ ಮೆತ್ತಗಾಗುವವರೆಗೆ ಹುರಿಯಿರಿ. ಮೆತ್ತಗಾದ ಮೇಲೆ ಕೊತ್ತಂಬರಿ ಸೊಪ್ಪು ಮತ್ತು ಪುದಿನ ಹಾಕಿ ಹುರಿಯಿರಿ. ಸ್ಟವ್ ಆಫ್ ಮಾಡಿ. ಬಿಸಿ ಆರಿದ ಮೇಲೆ ಅಗತ್ಯವಿದ್ದಷ್ಟು ನೀರು ಸೇರಿಸಿ ಅರೆಯಿರಿ. ಬಟಾಣಿ, ಕಡ್ಲೆಕಾಳು ಮತ್ತು ಆಲೂಗಡ್ಡೆ ಇರುವ ಕುಕ್ಕರ್ ಗೆ ಅರೆದ ಮಿಶ್ರಣವನ್ನು ಹಾಕಿ.

ಮಸಾಲೆ ಪುಡಿಗಳನ್ನು ಸೇರಿಸಿ (ಗರಂ ಮಸಾಲಾ ಪುಡಿ, ಚಾಟ್ ಮಸಾಲಾ,  ಜೀರಿಗೆ ಪುಡಿ ಮತ್ತು ಮಾವಿನಕಾಯಿ ಪುಡಿ). ಉಪ್ಪನ್ನೂ ಸೇರಿಸಿ. ಅಗತ್ಯವಿದ್ದಷ್ಟು ನೀರು ಸೇರಿಸಿ ಕುದಿಸಿ. ಗ್ರೇವಿ ತಯಾರಾಯಿತು.

ಸರ್ವಿಂಗ್ ಪ್ಲೇಟ್ ನಲ್ಲಿ 4 ಸೌಟಿನಷ್ಟು ತಯಾರಿಸಿದ ಗ್ರೇವಿಯನ್ನು ಹಾಕಿ. ನಂತರ ಸಣ್ಣದಾಗಿ ಹೆಚ್ಚಿದ ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು ಮತ್ತು ಸೇವ್ ನಿಂದ ಅಲಂಕರಿಸಿ. ಸವಿದು ಆನಂದಿಸಿ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!