RECIPE| ಸಿಂಪಲ್‌ ಬಟ್‌ ಟೇಸ್ಟೀ ಕುರ್ಮಾ ಹೀಗೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಹೋಟೆಲ್‌ ಸ್ಟೈಲ್‌ ವೆಜಿಟೆಬಲ್‌ ಕುರ್ಮಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ…ಇಲ್ಲಿ ನಾವು ಹೇಳಿ ಕೊಡುವ ರೀತಿಯಲ್ಲಿ ಕುರ್ಮಾ ತಯಾರಿಸದರೆ  ಪೂರಿ ಮತ್ತು ಗೀರೈಸ್‌ ಎರಡಕ್ಕೂ ತಾಳೆಯಾಗುತ್ತದೆ. ತರಕಾರಿ ಕುರ್ಮಾವನ್ನು ಹೇಗೆ ತಯಾರಿಸುವುದೆಂದು ನೋಡೋಣ…

ಬೇಕಾಗುವ ಸಾಮಗ್ರಿಗಳು

ಈರುಳ್ಳಿ-2, ಚಕ್ಕೆ, ಲವಂಗ-ಸ್ವಲ್ಪ, ಶುಂಠಿ-ಬೆಳ್ಳುಳ್ಳಿ ಪೇಸ್ಟ್‌-2ಚಮಚ, ಹಸಿಮೆಣಸು-6, ತೆಂಗಿನೆಣ್ಣೆ-3 ಚಮಚ, ಹುರಿಕಡಲೆ-2ಚಮಚ, ತೆಂಗಿನ ತುರಿ-1ಕಪ್‌, ಧನಿಯಾ ಪುಡಿ-1ಚಮಚ, ಅರಿಶಿನ ಪುಡಿ-ಸ್ವಲ್ಪ, ಕೊತ್ತಂಬರಿ ಸೊಪ್ಪು-ಸ್ವಲ್ಪ, ಬಡೆ ಸೊಂಪು-ಸ್ವಲ್ಪ, ಕರಿಬೇವು, ಉಪ್ಪು -ರುಚಿಗೆ ತಕ್ಕಷ್ಟು, ತರಕಾರಿ-ಟೊಮೆಟೋ-1, ನವಿಲ್‌ ಕೋಸು-1, ಬೀನ್ಸ್‌-10, ಕ್ಯಾರೆಟ್‌-2, ಹಸಿಬಟಾಣಿ-150ಗ್ರಾಂ, ಆಲೂಗಡ್ಡೆ-2. ಜತೆಗೆ ನಿಮಗೆ ಬೇಕಾದ ತರಕಾರಿಗಳನ್ನು ಬಳಸಬಹುದು.

ತಯಾರಿಸುವ ವಿಧಾನ

ಎಲ್ಲ ತರಕಾರಿಗಳನ್ನು ತೊಳೆದು ಸಣ್ಣಗೆ ಹೆಚ್ಚಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಚಕ್ಕೆ,ಲವಂಗ,ಶುಂಠಿ-ಬೆಳ್ಳುಳ್ಳಿ ಪೇಸ್ಟ್‌, ಹಸಿಮೆಣಸು, ಹುರಿಕಡಲೆ ಹಾಕಿ ಚೆನ್ನಾಗಿ ಹುರಿಯಿರಿ. ನಂತರ ಅದಕ್ಕೆ ಸಣ್ಣಗೆ ಹೆಚ್ಚಿದ ಈರುಳ್ಳಿ, ತೆಂಗಿನ ತುರಿ, ಧನಿಯಾ ಪುಡಿ, ಕೊತ್ತಂಬರಿ ಸೊಪ್ಪು, ಅರಿಶಿನ ಪುಡಿ ಹಾಕಿ ಸರಿಯಾಗಿ ಮಿಶ್ರಣ ಮಾಡಿ ನಂತರ ಮಿಕ್ಸ್‌ ಜಾರಿಗೆ ಇವೆಲ್ಲಾ ಮಸಾಲೆಯನ್ನು ಹಾಕಿ ನೀರನ್ನು ಸೇರಿಸಿ ಮಸಾಲೆ ರುಬ್ಬಿ ಇಟ್ಟುಕೊಳ್ಳಿ. ನಂತರ ಒಂದು ಪಾತ್ರೆಗೆ 1ಚಮಚ ಎಣ್ಣೆ ಹಾಕಿ ಬಿಸಿಯಾದ ಮೇಲೆ ಕರಿಬೇವು, ಬಡೆಸೊಂಪು ಹಾಕಿರಿ. ತದನಂತರ ಹೆಚ್ಚಿಟ್ಟ ತರಕಾರಿಯನ್ನು ಹಾಕಿ ಒಂದು ನಿಮಿಷಗಳ ಕಾಲ ಹುರಿಯಿರಿ. ಆಮೇಲೆ ಅದಕ್ಕೆ ರುಬ್ಬಿಟ್ಟ ಮಸಾಲೆಯನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಬೇಯಿಸಿರಿ. ಬಿಸಿ-ಬಿಸಿಯಾದ ವೆಜ್‌ ಕುರ್ಮಾ ರೆಡಿ…!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!