ಸಾಮಾಗ್ರಿಗಳು
ಬದನೆಕಾಯಿ
ಆಲೂಗಡ್ಡೆ
ಈರುಳ್ಳಿ
ಟೊಮ್ಯಾಟೊ
ಅಕ್ಕಿ
ಖಾರದಪುಡಿ
ವಾಂಗಿಬಾತ್ ಪುಡಿ
ಉಪ್ಪು
ಗರಂ ಮಸಾಲಾ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ, ಆಲೂಗಡ್ಡೆ ಹಾಕಿ ಬಾಡಿಸಿ
ಉಪ್ಪು, ಅರಿಶಿಣ ಪುಡಿ ಹಾಗೂ ಖಾರದಪುಡಿ ಹಾಕಿ
ನಂತರ ಬದನೆಕಾಯಿ ಹಾಕಿ, ಕರಿಬೇವು, ಕೊತ್ತಂಬರಿ ಹಾಕಿ
ನಂತರ ವಾಂಗಿಬಾತ್ ಪುಡಿ ಹಾಗೂ ಅಕ್ಕಿ ಹಾಕಿ
ನಂತರ ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ವಾಂಗಿಬಾತ್ ರೆಡಿ