ಮಲನ್ ಸ್ಫೋಟಕ ಬ್ಯಾಟಿಂಗ್ : ಭಾರತಕ್ಕೆ ಬೃಹತ್ ಗುರಿ ನೀಡಿದ ಇಂಗ್ಲೆಂಡ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಡೇವಿಡ್ ಮಲನ್ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಭಾರತ ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿದೆ.
ಟಾಸ್ ಗೆದ್ದ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಡೀಸೆಂಟ್ ಆರಂಭ ಪಡೆಯಿತು. ಬಟ್ಲರ್ 18ರನ್ ಸಿಡಿಸಿ ಔಟಾದರು. ಇತ್ತ ಜೇಸನ್ ರಾಯ್ 27 ರನ್ ಸಿಡಿಸಿ ನಿರ್ಗಮಿಸಿದರು. ಆದರೆ ಡೇವಿಡ್ ಮಲನ್ ಹೋರಾಟ ಟೀಂ ಇಂಡಿಯಾಗೆ ತಲೆನೋವಾಯಿತು.
ಫಿಲಿಪ್ ಸಾಲ್ಟ್ ಕೇವಲ 8 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆ ಇನ್ನಿಂಗ್ಸ್ ಮುಂದುವರಿಸಿದ ಡೇವಿಡ್ ಮಲನ್ ಅರ್ಧಶತಕ ಪೂರೈಸಿದರು. ಆದರೆ ಮೊಯಿನ್ ಆಲಿ ಡಕೌಟ್ ಆದರು.
ಲಿವಿಂಗ್‌ಸ್ಟೋನ್ ಹಾಗೂ ಹ್ಯಾರಿ ಬ್ರೂಕ್ ಜೊತೆಯಾಟ ಇಂಗ್ಲೆಂಡ್‌ಗೆ ನೆರವಾಯಿತು. ಆದರೆ ಬ್ರೂಕ್ 19 ರನ್ ಸಿಡಿಸಿ ಔಟಾದರು. ಕ್ರಿಸ್ ಜೋರ್ಡನ್ 11 ರನ್ ಸಿಡಿಸಿ ಔಟಾದರು. ಲಿಯಾಮ್ ಲಿವಿಂಗ್‌‌ಸ್ಟೋನ್ 29 ಪಂದ್ಯದಲ್ಲಿ ಅಜೇಯ 42 ರನ್ ಸಿಡಿಸಿದರು. ಇದರೊಂದಿಗೆ ಇಂಗ್ಲೆಂಡ್ 7 ವಿಕೆಟ್ ನಷ್ಟಕ್ಕೆ 215 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!