ಮಲಯಾಳಂ ನಟ ಮುಮ್ಮುಟ್ಟಿ ತಾಯಿ ಫಾತಿಮಾ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಲಯಾಳಂ (Malayalam)ನಟ ಮುಮ್ಮುಟ್ಟಿ (Mammootty) ಅವರ ತಾಯಿ ಫಾತಿಮಾ ಇಸ್ಮಾಯಿಲ್ (Fatima Ismail) ವಯೋಸಹಜ ಕಾಯಿಲೆಯಿಂದ ಮೃತಪಟ್ಟಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು.

ವಯೋಸಹಜ ಅನಾರೋಗ್ಯದ ಕಾರಣದಿಂದಾಗಿ ಫಾತಿಮಾ ಅವರಿಗೆ ಕೊಚ್ಚಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಪುತ್ರ ಮಮ್ಮುಟ್ಟಿ ಮತ್ತು ಮೊಮ್ಮಗ ಹಾಗೂ ಖ್ಯಾತ ನಟ ದುಲ್ಕರ್ ಸಲ್ಮಾನ್ (Dulquer Salmaan) ಬೆಳೆಸುವುದರಲ್ಲಿ ಫಾತಿಮಾ ಅವರ ಪಾತ್ರ ದೊಡ್ಡದಿದೆ. ಇವರಿಗೆ ಇಬ್ರಾಹಿಂ ಕುಟ್ಟಿ, ಶಫಿನಾ, ಸೌದಾ, ಜಕರಿಯಾ ಹಾಗೂ ಅಮೀನಾ ಹೀಗೆ ಐದು ಜನ ಮಕ್ಕಳು. ಮಮ್ಮುಟ್ಟಿ ಹಿರಿಯ ಪುತ್ರನಾಗಿದ್ದಾರೆ. ಅಗಲಿದ ಫಾತಿಮಾ ಅವರಿಗೆ ಮಲಯಾಳಂ ಚಿತ್ರೋದ್ಯಮ ಕಂಬನಿ ಮಿಡಿದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!