ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಆರ್ಥಿಕ ವಂಚನೆ ಆರೋಪ: ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್ ಮೆನನ್ ಬಂಧನ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಚಿತ್ರ ನಿರ್ಮಾಣಕ್ಕೆ ಸಂಬಂಧಿಸಿ ಆರ್ಥಿಕ ವಂಚನೆ ಆರೋಪದಲ್ಲಿ ಮಲಯಾಳಂ ಸಿನಿಮಾ ನಿರ್ದೇಶಕ ಶ್ರೀಕುಮಾರ್ ಮೆನನ್ ಅವರನ್ನು ಬಂಧಿಸಲಾಗಿದೆ.
ಶ್ರೀವತ್ಸಂ ಗ್ರೂಪ್​ ನೀಡಿದ ದೂರಿನ ಮೇರೆಗೆ ಕೇರಳದ ಅಲಪ್ಪುಳ ದಕ್ಷಿಣ ಪೊಲೀಸರು ಶ್ರೀಕುಮಾರ್​ನನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಶ್ರೀಕುಮಾರ್ ಮೆನನ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರೂ ಸಹ ನ್ಯಾಯಾಲಯ ಅರ್ಜಿಯನ್ನು ತಿರಸ್ಕರಿಸಿದ್ದು, ಸದ್ಯ ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಮಾಹಿತಿ ಹೊರಬರಬೇಕಿದೆ.
ಸಿನಿಮಾ ನಿರ್ಮಿಸಲು ಶ್ರೀವತ್ಸಂ ಗ್ರೂಪ್​ನಿಂದ ಹಣ ತೆಗೆದುಕೊಂಡಿದ್ದರು ಎಂದು ಹೇಳಲಾಗಿದ್ದು, .ಆದರೆ ಬಳಿಕ ಗ್ರೂಪ್​ನಿಂದ ಹಲವಾರು ಬಾರಿ ಸಂಪರ್ಕಿಸಿದರೂ, ಚಿತ್ರದ ನಿರ್ಮಾಣದ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಗ್ರೂಪ್​ನವರು ಶ್ರೀಕುಮಾರ್ ಮೆನನ್ ವಿರುದ್ಧ ಕೇಸು ದಾಖಲಿಸಿದ್ದಾರೆ.
ಶ್ರೀಕುಮಾರ್ ಮೆನನ್ ಕೇರಳದ ಜನಪ್ರಿಯ ಜಾಹೀರಾತು-ಚಲನಚಿತ್ರ ತಯಾರಕ. ಈ ಹಿಂದೆ ಅನೇಕ ಪ್ರಮುಖ ಕಂಪನಿಗಳಿಗೆ ಜಾಹೀರಾತುಗಳನ್ನು ರಚಿಸಿದ್ದಾರೆ. ಇದಲ್ಲದೆ ಮೋಹನ್ ಲಾಲ್ ಮತ್ತು ಮಂಜು ವಾರಿಯರ್ ನಟಿಸಿರುವ ‘ಒಡಿಯನ್’ ಚಿತ್ರವನ್ನೂ ನಿರ್ದೇಶಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss