ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಇಂದಿನ ಬಜೆಟ್ ನಲ್ಲಿ ಮಲೆನಾಡು, ಕರಾವಳಿ ಭಾಗದಲ್ಲಿ ಕಾಲುದಾರಿ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ಮೀಸಲಿಡಲಾಗಿದೆ. ಮಂಗಳೂರು-ಪಣಜಿ ಜಲಮಾರ್ಗ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಕಾರ್ಯ ನಡೆಯಲಿದೆ ಎಂದು ಸಿಎಂ ತಿಳಿಸಿದ್ದಾರೆ.
ಮಂಗಳೂರಿನ ಗಂಜಿಮಠದಲ್ಲಿ ಪ್ಲಾಸ್ಟಿಕ್ ಪಾರ್ಕ್ ಸ್ಥಾಪನೆ ಮಾಡಲು 150 ಕೋಟಿ ರೂ. ನೀಡಲಾಗುವುದು. ಹಾಗೆಯೇ ಮಂಗಳೂರಿನಲ್ಲಿ ಅಡ್ವಾನ್ಸ್ ಬಯೋಟೆಕ್ ಸೆಂಟರ್ ಫಾರ್ ಆಕ್ವಾ ಮೆರಿನ್ ಸ್ಥಾಪಿಸಲಾಗುವುದು. ಕ್ವಾಂಟಂ ಕಂಪ್ಯೂಟಿಂಗ್ ತಂತ್ರಜ್ಞಾನ ಸಂಶೋಧನ ಉತ್ತೇಜನಕ್ಕೆ 10 ಕೋಟಿ ಒದಗಿಸಲಾಗಿದೆ.