ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………
ಹೊಸದಿಗಂತ ಆನ್ ಲೈನ್ ಡೆಸ್ಕ್:
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ವಧು ಮಮತಾ ಬ್ಯಾನರ್ಜಿ ಎಂಬಾಕೆ ಜೂನ್ 13ರಂದು ವರ ಎಎಂ ಸೋಶಿಯಲಿಸಂ (ಸಮಾಜವಾದ)ರನ್ನ ಮದುವೆಯಾಗಲಿದ್ದಾಳೆ ಎಂದು ಮುದ್ರಿಸಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸದ್ಯ ವೈರಲ್ ಆಗುತ್ತಿದೆ.
ಈ ಆಮಂತ್ರಣ ಪತ್ರಿಕೆಯಲ್ಲಿ ವಧು – ವರರ ಹೆಸರನ್ನು ನೋಡಿದ ನೆಟ್ಟಿಗರು ಹೈರಾಣಾಗಿದ್ದು,. ನಿಜವಾಗಿಯೂ ಈ ಹೆಸರಿನ ವಧು -ವರರ ಮದುವೆಯಾಗುತ್ತಿದ್ಯಾ ಅಥವಾ ಇದು ಎಡಿಟ್ ಮಾಡಿರುವ ಆಮಂತ್ರಣ ಪತ್ರಿಕೆಯಾ ಎಂದು ನೆಟ್ಟಿಗರು ಪ್ರಶ್ನೆ ಮಾಡುವಂತಾಗಿದೆ.
ಇನ್ನು ಆಮಂತ್ರಣ ಪತ್ರಿಕೆಯ ವರನ ಹಿರಿಯ ಸಹೋದರ ಎಎಂ ಕಮ್ಯೂನಿಸಂ ಹಾಗೂ ಎಎಂ ಲೆನಿಸಿಸಂ ಎಂದು ಉಲ್ಲೇಖಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಈ ಆಮಂತ್ರಣ ಪತ್ರಿಕೆ ವೈರಲ್ ಆಗುತ್ತಿದ್ದಂತೆಯೇ ವಧು ಹಾಗೂ ವರರ ಕುಟುಂಬಸ್ಥರು ಇದು ನಿಜವಾದ ಆಮಂತ್ರಣ ಪತ್ರಿಕೆ ಅಂತಾ ಕನ್ಫರ್ಮ್ ಮಾಡಿದ್ದಾರೆ. ಸೋಶಿಯಲಿಸಂ ಲೆನಿನ್ ಮೋಹನ್ ಎಂಬವರ ಪುತ್ರ ಆಗಿದ್ದಾರೆ. ಮೋಹನ್ ಸೇಲಂನ ಸಿಪಿಐ ಪಕ್ಷದ ಜಿಲ್ಲಾ ಕಾರ್ಯದರ್ಶಿ ಆಗಿದ್ದಾರೆ.
ತಮ್ಮ ಮನೆಯಲ್ಲಿ ಈ ರೀತಿ ವಿಶಿಷ್ಟ ಹೆಸರನ್ನ ಇಟ್ಟಿರುವ ಬಗ್ಗೆ ವಿವರಣೆ ನೀಡಿದ ಮೋಹನ್, ಸೋವಿಯತ್ ಒಕ್ಕೂಟವು ಪತನವಾದ ಬಳಿಕ ಅನೇಕರು ಕಮ್ಯುನಿಸಂ ಸಿದ್ಧಾಂತವು ಪ್ರಪಂಚದ ಯಾವುದೇ ಮೂಲೆಯಲ್ಲಿ ಏಳ್ಗೆ ಹೊಂದಿಲ್ಲ ಎಂದು ಹೇಳುತ್ತಿದ್ದರು. ಈ ಸಮಯದಲ್ಲಿ ನನ್ನ ಪತ್ನಿ ಮೊದಲ ಮಗುವಿಗೆ ಜನ್ಮ ನೀಡಿದ್ದಳು. ಎಲ್ಲಿಯವರೆಗೆ ಮನುಷ್ಯರು ಭೂಮಿಯಲ್ಲಿ ಇರುತ್ತಾರೋ ಅಲ್ಲಿಯವರೆಗೆ ಕಮ್ಯೂನಿಸಂ ಪತನವಾಗೋಕೆ ಸಾಧ್ಯವೇ ಇಲ್ಲ ಎಂದು ನಂಬಿದ್ದ ನಾನು ಕಮ್ಯೂನಿಸಂ ಎಂದು ಮಗನಿಗೆ ನಾಮಕರಣ ಮಾಡಿದೆ. ಇದಾದ ಬಳಿಕ ಉಳಿದ ಇಬ್ಬರಿಗೂ ಇದೇ ಮಾದರಿಯ ಹೆಸರನ್ನು ಇಟ್ಟಿದ್ದೇನೆ ಎಂದು ಹೇಳಿದ್ದಾರೆ.
ವಧು ಕೂಡ ಮೋಹನ್ರ ದೂರದ ಸಂಬಂಧಿಯೇ ಆಗಿದ್ದಾಳೆ. ಈಕೆಯ ತಾತ ಕಾಂಗ್ರೆಸ್ ಪಕ್ಷದವರಾಗಿದ್ದರು. ಮಮತಾ ಬ್ಯಾನರ್ಜಿಯವರ ಕಾರ್ಯಗಳನ್ನ ಮೆಚ್ಚಿದ ಅವರು ತಮ್ಮ ಮೊಮ್ಮಗಳಿಗೆ ಮಮತಾ ಬ್ಯಾನರ್ಜಿ ಎಂದು ನಾಮಕರಣ ಮಾಡಿದ್ದಾರಂತೆ..!