ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ಸಂಚಲನ ಮೂಡಿಸಿದ ಮಣಿಪುರದಲ್ಲಿನ ಇಬ್ಬರು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿಸಿ ಅತ್ಯಾಚಾರ ಎಸಗಿದ ಘಟನೆ ಖಂಡಿಸಿ ದೇಶದ ಮೂಲೆ ಮೂಲೆಯಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಆದರೆ ಇತ್ತ ಪಶ್ಚಿಮ ಬಂಗಾಳಯದ ಪಂಚಾಯತ್ ಚುನಾವಣೆಯಲ್ಲಿ ನಡೆದ ಆ ಒಂದು ಭೀಕರ ಘಟನೆ ಎಲ್ಲೂ ಬಹಿರಂಗವಾಗಲೇ ಇಲ್ಲ ಎಂದು ಬಿಜೆಪಿಯ ಹೂಗ್ಲಿ ಸಂಸದೆ ಲೊಕೆಟ್ ಚಟರ್ಜಿ ಸ್ಪೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ.
ಪಶ್ಚಿಮ ಬಂಗಾಳಯದ ಪಂಚಾಯತ್ ಚುನಾವಣೆಯಲ್ಲಿ ಮತಗಟ್ಟೆ ಬೂತ್‌ನಲ್ಲಿದ್ದ ಪಂಚಾಯತ್ ಮಹಿಳಾ ಬಿಜೆಪಿ ಅಭ್ಯರ್ಥಿಯನ್ನೇ ತೀವ್ರವಾಗಿ ಥಳಿಸಿ, ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಈ ಕುರಿತು ಬಿಜೆಪಿ ಸತತ ಹೋರಾಟದ ಬಳಿಕ ಬಂಗಾಳ ಪೊಲೀಸರು ದೂರು ದಾಖಲಿಸಿದ್ದಾರೆ. ಆದರೆ ಇದುವರೆಗೂ ಒಬ್ಬರೂ ಬಂಧಿಸಿಲ್ಲ ಎಂದು ಬಿಜೆಪಿಯ ಹೂಗ್ಲಿ ಸಂಸದೆ ಲೊಕೆಟ್ ಚಟರ್ಜಿ ಕಣ್ಣೀರಿಟ್ಟಿದ್ದಾರೆ.
ಸುದ್ದಿಗೋಷ್ಠಿ ನಡೆಸಿದಅವರು, ಹೌರಾದ ಪಾಂಚ್ಲಾದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಥಳಿಸಿ, ನಗ್ನಗೊಳಿಸಲಾಗಿದೆ. ಬಳಿಕ ಮೆರವಣಿಗೆ ಮಾಡಲಾಗಿದೆ. ಈ ವೇಳೆ ಕಲ್ಲು ತೂರಾಟವನ್ನು ನಡೆಸಿದ್ದಾರೆ.
ಈ ಘಟನೆ ಹಾಗೂ ಮಣಿಪುರ ಘಟನೆ ಕುರಿತು ಕೇಳಿದ ಪ್ರಶ್ನೆಗೆ ಸುದ್ದಿಗೋಷ್ಠಿಯಲ್ಲಿ ಲೊಕೆಟ್ ಚಟರ್ಜಿ ನೋವು ತಡೆದುಕೊಳ್ಳಲು ಸಾಧ್ಯವಾಗದೆ ಕಣ್ಣೀರಿಟ್ಟಿದ್ದಾರೆ. ನಾವು ಮಹಿಳೆಯರು. ನಾವು ಕೂಡ ಇದೇ ದೇಶದ ಪ್ರಜೆಗಳು, ಪಶ್ಚಿಮ ಬಂಗಾಳ ಭಾರತದೊಳಗೆ ಇರುವ ರಾಜ್ಯ. ನಮ್ಮ ಹೆಣ್ಣುಮಕ್ಕಳನ್ನು ಉಳಿಸಿ ಎಂದು ಕಣ್ಣೀರಿಟ್ಟಿದ್ದಾರೆ.
ನಾನು ಮಣಿಪುರದ ಘಟನೆಯನ್ನು ಖಂಡಿಸುತ್ತೇನೆ. ಇದು ಮನಕುಲವೇ ತಲೆ ತಗ್ಗಿಸುವಂತ ಕೆಲಸ. ಇದೇ ರೀತಿಯ ಘಟನೆ ಪಶ್ಟಿಮ ಬಂಗಾಳದ ಪಂಚಾಯತ್ ಚುನಾವಣೆಯಲ್ಲೂ ನಡೆದಿದೆ. ಆದರೆ ಇಡೀ ದೇಶ ಈ ಕುರಿತು ಯಾಕೆ ಮಾತನಾಡುತ್ತಿಲ್ಲ. ಪಶ್ಚಿಮ ಬಂಗಾಳದ ಹೆಣ್ಣುಮಕ್ಕಳು ನಮ್ಮವರಲ್ಲವೇ? ಬಂಗಾಳದ ಮಹಿಳೆಗೆ ರಕ್ಷಣೆ ಬೇಡವೆ? ಎಂದು ಪ್ರಶ್ನಿಸಿದ್ದಾರೆ.
ಜುಲೈ 8 ರ ಚುನಾವಣೆ ವೇಳೆ ಬಿಜೆಪಿ ಕಾರ್ಯಕರ್ತೆಯನ್ನು ಗೂಂಡಾಗಳು ಹಿಡಿದು ಥಳಿಸಿದ್ದಾರೆ. ಬಳಿಕ ಲೈಂಗಿಕ ಕಿರುಕುಳ ನೀಡಿದ್ದಾರೆ. ಆಕೆಯ ಸೀರೆ, ಒಳಉಡುಪು ಹರಿದಿದ್ದಾರೆ. ಬಳಿಕ ನಗ್ನಗೊಳಿಸಿ ಮೆರವಣಿಗೆ ಮಾಡಿದ್ದಾರೆ. ಈ ವೇಳೆ ಹಲವರು ಮಹಿಳೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಇನ್ನು ಮಹಿಳೆಯ ಖಾಸಗಿ ಅಂಗಗಳನ್ನು ಮುಟ್ಟಿ ಕಿರುಕುಳ ನೀಡಿದ್ದಾರೆ. ಇನ್ನು ಜುಲೈ 11ರ ಮತ ಏಣಿಕೆ ದಿನವೂ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಲ್ಲೆ ಮಾಡಲಾಗಿದೆ. ಈದರೆ ಬೂತ್ ಒಳಗೆ ಟಿಎಂಸಿ ಗೂಂಡಾಗಳು ಪಿಸ್ತೂಲ್ ಹಿಡಿದು ನಿಂತಿರುವ ಕಾರಣ ಯಾವುದೇ ಕಾರ್ಯಕರ್ತರು ವಿಡಿಯೋ ರೆಕಾರ್ಡ್ ಮಾಡುವ ಅವಕಾಶವೇ ಇರಲಿಲ್ಲ. ಎರಡು ಘಟನೆಗಳಲ್ಲಿ ವಿಡಿಯೋ ದಾಖಲೆ ಇಲ್ಲ. ದೇಶ ಇದೀಗ ವಿಡಿಯೋ ದಾಖಲೆ ಇದ್ದ ಘಟನೆ ಬಗ್ಗೆ ಮಾತ್ರ ಮಾತನಾಡುತ್ತಿದೆ. ಬಂಗಾಳದ ಹೆಣ್ಣುಮಕ್ಕಳ ಕುರಿತು ಮೌನವೇಕೆ ಎಂದು ಸಂಸದೆ ಲೊಕೆಟ್ ಚಟರ್ಜಿ ಪ್ರಶ್ನಿಸಿದ್ದಾರೆ.
ಬಿಜೆಪಿ ಮಹಿಳಾ ಕಾರ್ಯಕರ್ತರು, ಬಿಜೆಪಿ ಮಹಿಳಾ ಅಭ್ಯರ್ಥಿಗಳ ಮೇಲೆ 40 ರಿಂದ 50 ಟಿಎಂಸಿ ಕಾರ್ಯಕರ್ತರು ದಾಳಿ ಮಾಡಿದ್ದಾರೆ. ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಈ ಕುರಿತು ಬಂಗಾಳ ಪೊಲೀಸರು ಕ್ರಮ ಕೈಗೊಳ್ಳುತ್ತಿಲ್ಲ. ಮಮತಾ ಬ್ಯಾನರ್ಜಿ ಸರ್ಕಾರ ಮಣಿಪುರದ ಘಟನೆ ಖಂಡಿಸುತ್ತಾ, ತಮ್ಮ ಪಕ್ಕದಲ್ಲೇ ನಡೆದ ಘಟನೆ ಬಗ್ಗೆ ಮೌನ ವಹಿಸಿದ್ದಾರೆ ಎಂದ ಬಿಜೆಪಿ ನಾಯಕರು ಆರೋಪಿಸಿದ್ದಾರೆ.