Thursday, August 11, 2022

Latest Posts

ಮನೆ ಅಂಗಳದಲ್ಲಿ ಗಾಂಜಾ ಬೆಳೆದ ವ್ಯಕ್ತಿಯ ಬಂಧನ

ಹೊಸದಿಗಂತ ವರದಿ, ಕೊಡಗು:

ಮನೆಯ ಅಂಗಳದಲ್ಲಿ ಗಾಂಜಾ ಬೆಳೆಸಿದಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪೊನ್ನಂಪೇಟೆ ಠಾಣಾ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿ ನಿವಾಸಿ ಹೆಚ್.ಜಿ.ಮೋಹನ್(32) ಬಂಧಿತ ಆರೋಪಿಯಾಗಿದ್ದು, ಸುಮಾರು 50ಸಾವಿರ ರೂ. ಮೌಲ್ಯದ 9ಗಾಂಜಾ ಗಿಡಗಳನ್ನು ವಶಪಡಿಸಿಕೊಳ್ಳಲಾಗಿದೆ.
ಹಳ್ಳಿಗಟ್ಟು ಗ್ರಾಮದ ದೇವ ಕಾಲೋನಿಯ ನಿವಾಸಿ ಮೋಹನ್ ಎಂಬವರು ತನ್ನ ಮನೆಯ ಆವರಣದಲ್ಲಿ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದಿರುವುದಾಗಿ ಗೋಣಿಕೊಪ್ಪ ವೃತ್ತದ ಸಿ.ಪಿ.ಐ ಎಸ್.ಎನ್.ಜಯರಾಮ್ ಅವರಿಗೆ ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಈ ಪ್ರಕರಣದ ಪತ್ತೆ ಕಾರ್ಯದಲ್ಲಿ ಗೋಣಿಕೊಪ್ಪ ವೃತ್ತ ಸಿ.ಪಿ.ಐ ಎಸ್.ಎನ್.ಜಯರಾಮ್, ಪೊನ್ನಂಪೇಟೆ ಠಾಣಾ ಪಿಎಸ್‍ಐ ಡಿ.ಕುಮಾರ್ ಹಾಗೂ ಸಿಬ್ಬಂದಿಯವರಾದ ಎಂ.ಡಿ.ಮನು, ಪಿ.ಎ.ಮಹಮದ್ ಅಲಿ, ಕೆ.ಎಸ್.ಮಹೇಂದ್ರ, ಅಬ್ದುಲ್ ಮಜೀದ್, ಮಹದೇಶ್ವರ ಸ್ವಾಮಿ, ಹೇಮಲತಾ ರೈ ,ಅಬ್ದುಲ್ ಬಶೀರ್ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss