ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ರೈತನ ಮೇಲೆ ಹೆಜ್ಜೇನು ದಾಳಿ: ಆರೋಗ್ಯ ಸ್ಥಿತಿ ಗಂಭೀರ

ಹೊಸದಿಗಂತ ವರದಿ, ಕೊಡಗು:

ಹೆಜ್ಜೇನು ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಗಾಯಗೊಂಡಿರುವ ಘಟನೆ ಗೋಣಿಕೊಪ್ಪ ಸಮೀಪದ ಕಳತ್ಮಾಡು‌ ಗೊಟ್ಟಡದಲ್ಲಿ ನಡೆದಿದೆ.
ಅಲ್ಲಿನ ರೈತ ಬಾರಿಕೆ ದೇವಯ್ಯ (ಸುಂದರ್-65) ಅವರ ಮೇಲೆ ಗುರುವಾರ ಮಧ್ಯಾಹ್ನ 3 ಗಂಟೆ‌ ಸುಮಾರಿಗೆ 300 ಕ್ಕೂ ಅಧಿಕ ಹೆಜ್ಜೇನು ಕಚ್ಚಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾರೆ.
ಗದ್ದೆಯಲ್ಲಿ ಮೇಯುತ್ತಿದ್ದ ದನವನ್ನು ಕರೆತರಲು ಹೋದಾಗ ಹೆಜ್ಜೇನು ದಾಳಿ ಮಾಡಿದೆ.
ಈ ಸಂದರ್ಭ ತಮ್ಮ ಅಂಗಿಯನ್ನು ಬಿಚ್ಚಿ ಹಾಕಿ ಅವರು ಓಟಕ್ಕಿತ್ತ ಪರಿಣಾಮ ಅಪಾಯದಿಂದ ಪಾರಾಗಿದ್ದು, ಬಳಿಕ ಪತ್ನಿ ಸರಸು ಅವರು ‌ಕಿವಿ, ತಲೆ, ಮೂಗು, ದೇಹದ ಇತರೆ ಭಾಗದಲ್ಲಿದ್ದ ಹೆಜ್ಜೇನು ಮುಳ್ಳನ್ನು ಕಿತ್ತಿದ್ದಾರೆ. ಸಾವರಿಸಿಕೊಂಡ ದೇವಯ್ಯ ಅವರನ್ನು ಗೊಟ್ಟಡದ ಮನು ಮತ್ತು ಬಾಲಕೃಷ್ಣ ಅವರು ಆಸ್ಪತ್ರೆಗೆ ದಾಖಲು ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss