ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾನಗಲ್ ತಾಲೂಕು ಶೇಷಗಿರಿ ಗ್ರಾಮದಲ್ಲಿನ ಗಂಗಾಪರಮೇಶ್ವರಿ ಕಳಸಾರೋಹಣ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಕ್ರೇನ್ನ ಬಕೇಟ್ ಮುರಿದು ಕೆಳಗೆ ಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೋರ್ವನಿಗೆ ಗಂಭೀರವಾಗಿ ಗಾಯವಾಗಿದೆ. ಮಂಜು ಪಾಟೀಲ (42) ಮೃತ ದುರ್ದೈವಿ. ಮಂಜು ಬಡಿಗೇರ್ ಗಂಭೀರವಾಗಿ ಗಾಯಗೊಂಡಿದ್ದು, ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ರೇನ್ನ ಮೂಲಕ ಕಳಸ ಸ್ಥಾಪನೆ ಕಾರ್ಯ ನಡೆದಾಗ ಕ್ರೇನ್ ಬಕೆಟ್ ಮುರಿದು ಇಬ್ಬರೂ ಕೆಳಗೆ ಬಿದ್ದಿದ್ದಾರೆ. ಅಡೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ. ಕ್ರೇನ್ ಮಾಲೀಕನ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.