ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಸಾ*ವು: ಹೀಟ್‌ಸ್ಟ್ರೋಕ್‌?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: ರಾಯಚೂರಿನಲ್ಲಿ ಉದ್ಯೋಗ ಖಾತ್ರಿ ಕೆಲಸಕ್ಕೆ ಹೋಗಿ ಮರಳುವ ಮಾರ್ಗ ಮಧ್ಯದಲ್ಲಿ ವ್ಯಕ್ತಿಯೊಬ್ಬರು ಪ್ರಾಣ ಬಿಟ್ಟಿದ್ದಾರೆ. 45 ವರ್ಷದ ಹುಸೇನಪ್ಪ ಮಡಿವಾಳ್‌ ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದರು. ಅಲ್ಲಲ್ಲಿ ವಿಶ್ರಾಂತಿ ಪಡೆಯದೇ ಮುಂದಿನ ಪ್ರಯಾಣ ನಡೆಸುತ್ತಿದ್ದರು ಎನ್ನಲಾಗಿದೆ. ಹುಸೇನಪ್ಪ ಬಿಸಿಲಿನಿಂದ ಸುಸ್ತಾಗಿ ವಿಶ್ರಾಂತಿಯೂ ಇಲ್ಲದೆ ಹೈರಾಣಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ. ಯಾಪಲದಿನ್ನಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಉದ್ಯೋಗ ಖಾತ್ರಿ ಕೆಲಸಕ್ಕೆಂದು ರಾತ್ರಿ ಹೋಗಿದ್ದ ಹುಸೇನಪ್ಪ ವಾಪಸ್‌ ಬರುವಾಗ ಹೆಣವಾಗಿದ್ದಾರೆ. ರಾತ್ರಿ ಹೋದವರು … Continue reading ಉದ್ಯೋಗ ಖಾತ್ರಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದ ವ್ಯಕ್ತಿ ಸಾ*ವು: ಹೀಟ್‌ಸ್ಟ್ರೋಕ್‌?