ಹೊಸದಿಗಂತ ವರದಿ, ಬನವಾಸಿ:
ಕಟ್ಟಡ ನಿರ್ಮಾಣದ ವೇಳೆಯಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಶನಿವಾರ ಮಧ್ಯಾಹ್ನ ಬನವಾಸಿಯಲ್ಲಿ ನಡೆದಿದೆ.
ಇಲ್ಲಿನ ಪಿ.ಡಬ್ಯ್ಲೂ.ಡಿಯ ಪ್ರವಾಸಿ ಮಂದಿರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸತೀಶ ತಮ್ಮಣ್ಣಗೌಡ ಪಾಟೀಲ(38)ಮೃತ ದುರ್ದೈವಿ. ಮೃತನು ತನ್ನ ಹಳೆಯ ಮನೆಯ ಹಿಂಬದಿಯಲ್ಲಿ ಹೊಸ ಮನೆಯ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದು ಹಳೆಯ ಮನೆಯಿಂದ ಕೆಲಸಕ್ಕೆ ವಿದ್ಯುತ್ ಸಂಪರ್ಕ ಪಡೆದಿದ್ದು ಶನಿವಾರ 11ಗಂಟೆ ಸುಮಾರಿಗೆ ಕೆಲಸ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ವೀಚ್ ಬೋರ್ಡ್ ಮೇಲೆ ಕಾಲಿಟ್ಟ ಪರಿಣಾಮ ವಿದ್ಯುತ್ ಶಾಕ್ ತಗುಲಿದೆ. ಚಿಕಿತ್ಸೆಗಾಗಿ ಬನವಾಸಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತರಲಾಗಿದ್ದು ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿದ್ದಾರೆ ಎಂದು ತಿಳಿಸಿರುವುದಾಗಿ ಮೃತನ ತಂದೆ ತಮ್ಮಣ್ಣ ಗೌಡ ಬನವಾಸಿ ಪೋಲಿಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಿಸಿದ್ದಾರೆ. ಬನವಾಸಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.