ಸದಾ ಮೊಬೈಲ್‌ನಲ್ಲಿ ವಿಡಿಯೊ ಗೇಮ್ ಆಡುತ್ತಿದ್ದ ಮಗನಿಗೆ ತಂದೆ ಕೊಟ್ಟ ಶಿಕ್ಷೆ ಏನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಇಂದಿನ ಪೀಳಿಗೆಯ ಯುವಕರು ಮತ್ತು ಮಕ್ಕಳು ಮೊಬೈಲ್ ಗೇಮ್‌ಗಳು ಮತ್ತು ವಿಡಿಯೋ ಗೇಮ್‌ಗಳಿಗೆ ಹೆಚ್ಚು ವ್ಯಸನಿಯಾಗಿದ್ದಾರೆ. ಬಿಡುವಿನ ಸಮಯ ಸಿಕ್ಕರೆ ಸಾಕು.. ಆಟವಾಡುತ್ತಾ ಕಳೆಯುತ್ತಿದ್ದಾರೆ. ಹಗಲು ರಾತ್ರಿಯೆನ್ನದೆ ನಿರಂತರವಾಗಿ ಆಟಗಳಲ್ಲಿ ಮುಳುಗಿರುತ್ತಾರೆ. ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳಿಗೆ ಎಷ್ಟೇ ಎಚ್ಚರಿಕೆ ನೀಡಿದರೂ ಕೆಲವರು ಬದಲಾಗುವುದಿಲ್ಲ.

ಮಾತು ಕೇಳದೆ ಆಟವಾಡುತ್ತಿದ್ದ ಮಗನಿಗೆ ತಂದೆ ಪಾಠ ಕಲಿಸಿದ್ದಾರೆ. ಚೀನಾದ ಶೆನ್‌ಜೆನ್ ಪ್ರಾಂತ್ಯದ ಹನ್ನೊಂದು ವರ್ಷದ ಬಾಲಕ ನಿತ್ಯ ಮೊಬೈಲ್ ಗೇಮ್‌ಗಳನ್ನು ಆಡುತ್ತಿದ್ದ. ಇತ್ತೀಚಿಗೆ ರಾತ್ರಿ ಒಂದು ಗಂಟೆಯ ನಂತರವೂ ಮೊಬೈಲ್ ಗೇಮ್ ಆಡುತ್ತಿರುವುದನ್ನು ತಂದೆ ನೋಡಿದ್ದಾರೆ. ರಾತ್ರಿ ವೇಳೆ ಮೊಬೈಲ್ ಗೇಮ್ ಆಡಬೇಡಿ ಎಂದು ಬಾಲಕನಿಗೆ ಈ ಹಿಂದೆ ಹಲವು ಬಾರಿ ಹೇಳಿದರೂ ಕೇಳದ ಮಗನಿಗೆ ಶಿಕ್ಷೆ ವಿಧಿಸಿದರು. 17 ಗಂಟೆಗಳ ಕಾಲ ನಿದ್ರೆ ಮಾಡದೆ ಮೊಬೈಲ್ ಗೇಮ್ ಅನ್ನು ಆಡುವಂತೆ ಆದೇಶಿಸಿದರು. ಮಧ್ಯರಾತ್ರಿಯಿಂದ ಮರುದಿನ ಸಂಜೆ ಆರು ಗಂಟೆಯವರೆಗೆ ಆಟ ಆಡಬೇಕು ಎಂದರು.

ಹೀಗಾಗಿ ಬಾಲಕ ತನ್ನ ತಂದೆ ಹೇಳಿದಂತೆ ಮೊಬೈಲ್ ಗೇಮ್ ಆಡಲು ಯತ್ನಿಸಿದ್ದಾನೆ. ಆದರೆ, ಅದು ಅವನಿಂದಾಗಲಿಲ್ಲ. ಗಂಟೆಗಟ್ಟಲೆ ಆಟ ಆಡಿ ಕೊನೆಗೆ ವಾಂತಿ ಮಾಡಿಕೊಂಡು ಆಟವಾಡಲು ಸಾಧ್ಯವಾಗಲಿಲ್ಲ ಎಂದು ಬಾಲಕ ಕಣ್ಣೀರು ಹಾಕಿದನು. ಮಲಗುವ ಮುನ್ನ ಆಟ ಆಡುವುದಿಲ್ಲ, 11 ಗಂಟೆಯ ಮೊದಲೇ ಮಲಗುತ್ತೇನೆ ಎಂದು ಮಾತು ಕೊಟ್ಟನಂತೆ. ಇದನ್ನೆಲ್ಲ ತಂದೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!