ರಷ್ಯಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ತಲೆಮರೆಸಿಕೊಂಡಿದ್ದ ಆರೋಪಿ ಗದಗದಲ್ಲಿ ಸೆರೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಉತ್ತರ ಗೋವಾದ ಅರಂಬೋಲ್‌ನಲ್ಲಿರುವ ರೆಸಾರ್ಟ್‌ನಲ್ಲಿ 12 ವರ್ಷದ ರಷ್ಯಾದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಕರ್ನಾಟಕದ ಗದಗದಲ್ಲಿ ಗೋವಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರವಿ ಲಮಾಣಿ (28) ಎಂದು ಗುರುತಿಸಲಾಗಿದೆ. ಅರಂಬೋಲ್‌ ರೆಸಾರ್ಟ್‌ನಲ್ಲಿ ರೂಮ್ ಅಟೆಂಡೆಂಟ್ ಆಗಿ ಕೆಲಸ ಮಾಡುವ ಆರೋಪಿ ಅಪ್ರಾಪ್ತ ಮಗಳ ಮೇ 6 ರಂದು ಮೇಲೆ ರೆಸಾರ್ಟ್‌ನ ಈಜುಕೊಳದಲ್ಲಿ ಹಾಗೂ ಹೋಟೆಲ್ ಕೊಠಡಿಯೊಳಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತೆಯ ತಾಯಿ ಮೇ 9 ರಂದು ದೂರು ದಾಖಲಿಸಿದ್ದರು. ದುಷ್ಕೃತ್ಯ ಎಸಗಿ ಸ್ವಂತ ಊರಿಗೆ ಪರಾರಿಯಾಗಿದ್ದ ಆರೋಪಿಯನ್ನು ಪೆರ್ನೆಮ್ ಪೊಲೀಸರ ತಂಡ ಕರ್ನಾಟಕದ ಗದಗ್‌ನಲ್ಲಿ ಬಂಧಿಸಿದೆ ಎಂದು ಠಾಣೆಯ ಇನ್ಸ್‌ಪೆಕ್ಟರ್ ವಿಕ್ರಮ್ ನಾಯ್ಕ್ ಮಾಹಿತಿ ನೀಡಿದ್ದಾರೆ.
ದೂರಿನ ಪ್ರಕಾರ, ಬಾಲಕಿಯ ತಾಯಿ ಅರಂಬೋಲ್‌ನ ಹತ್ತಿರದ ಮಾರುಕಟ್ಟೆಯಿಂದ ಕೆಲವು ಅಗತ್ಯ ವಸ್ತುಗಳನ್ನು ತರಲು ಹೊರಗೆ ಹೋಗುವಾಗ ಮಗಳನ್ನು ಈಜುಕೊಳದಲ್ಲಿ ಬಿಟ್ಟು ಹೋಗಿದ್ದರು, ಆಗ ಈ ಘಟನೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.
ಲಮಾಣಿ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ), ಗೋವಾ ಮಕ್ಕಳ ಕಾಯ್ದೆಯ ಸೆಕ್ಷನ್ 8 ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!