spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, December 9, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅ. 24ಕ್ಕೆ ಮನ್​ ಕಿ ಬಾತ್: ಸಾರ್ವಜನಿಕರಿಂದ ಅನಿಸಿಕೆ ಆಹ್ವಾನಿಸಿದ ಪ್ರಧಾನಿ ಮೋದಿ

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್​ 24ರಂದು ತಮ್ಮ ರೇಡಿಯೋ ಕಾರ್ಯಕ್ರಮ ಮನ್​ ಕಿ ಬಾತ್​​ನ 82ನೇ ಆವೃತ್ತಿಯಲ್ಲಿ ಮಾತನಾಡಲಿದ್ದಾರೆ. ಈ ಸಂಚಿಕೆಯಲ್ಲಿ ಸಾರ್ವಜನಿಕರ ತಮ್ಮ ವಿಚಾರ, ಆಲೋಚನೆಯನ್ನು ಹಂಚಿಕೊಳ್ಳುವಂತೆ ಆಹ್ವಾನಿಸಿದ್ದಾರೆ.

ಈ ಕುರಿತು  ಮೋದಿ ಟ್ವೀಟ್ ಮಾಡಿದ್ದು, ಇದೇ ಅ. 24ರಂದು ಮನ್ ಕಿ ಬಾತ್ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಮಾಸಿಕ ಆವೃತ್ತಿಗೆ ನಿಮ್ಮ ಅಭಿಪ್ರಾಯಗಳನ್ನು ನಾನು ಆಹ್ವಾನಿಸುತ್ತಿದ್ದೇನೆ. ನೀವು ನಮೋ ಆಪ್ ಅಥವಾ @mygovindi ಅಥವಾ  1800-11-7800 ಗೆ ಕರೆ ಮಾಡಿ ದಾಖಲಿಸಬಹುದು ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರಧಾನಿ ಕಚೇರಿ ಕೂಡ ಪ್ರಕಟಣೆ ಹೊರಡಿಸಿದ್ದು, 82 ಆವೃತ್ತಿಯ ಮನ್ ಕಿ ಬಾತ್ ನಲ್ಲಿ ಸಾರ್ವಜನಿಕರೂ ತಮ್ಮ ಅನಿಸಿಕೆ, ಅಭಿಪ್ರಾಯ, ವಿಚಾರಗಳನ್ನು ನಮೋ ಆ್ಯಪ್​, ಮೈ ಗವ್​ (NaMo App and My Gov)ಮೂಲಕ ಹಂಚಿಕೊಳ್ಳಬಹುದು. ಇಲ್ಲದೆ ಇದ್ದರೆ ತಮ್ಮ ಅನಿಸಿಕೆಯನ್ನು ರೆಕಾರ್ಡ್​ ಮಾಡಿ 1800-11-7800ಕ್ಕೆ ಕಳಿಸಬಹುದು ಎಂದು ತಿಳಿಸಿದೆ.

ದೇಶದಲ್ಲಿ ಕೋವಿಡ್ ಲಸಿಕೆ ಅಭಿಯಾನ ಮುಂದಿನ ವಾರ 100 ಕೋಟಿ ಗಡಿಯನ್ನೂ ದಾಟಿ ದಾಖಲೆ ನಿರ್ಮಿಸಲಿದೆ. ಈ ಬಾರಿಯ ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿಯವರು ಲಸಿಕಾ ಅಭಿಯಾನ 100 ಕೋಟಿ ದಾಖಲೆ ಕುರಿತು ಮಾತನಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss