ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸದಿಗಂತ ವರದಿ, ಮುಂಡಗೋಡ:
ಪಟ್ಟಣದ ಹೊರವಲಯದ ನ್ಯಾಸರ್ಗಿ ಗ್ರಾಮಕ್ಕೆ ಹೋಗುವ ಮಾರ್ಗ ಮಧ್ಯದಲ್ಲಿ ಪಟ್ಟಣದ ಕಂಬಾರಗಟ್ಟಿಯ ಯುವಕನನ್ನು ದುಷ್ಕರ್ಮಿಗಳು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಇಂದು ಮುಂಜಾನೆ ನಡೆದಿದೆ.
ಪಟ್ಟಣದ ಕಂಬಾರಗಟ್ಟಿಯ ವಿಜಯ ಇಳಗೇರ (25) ಕೊಲೆಯಾದ ಯುವಕ. ಬೆಳಗಿನ ಜಾವ ನ್ಯಾಸರ್ಗಿ ಹಾಗೂ ಕುಂದರಗಿ ಗ್ರಾಮದ ಕಡೆಗೆ ವಾಕಿಂಗ್ ಗೆ ಹೋದ ಸಾರ್ವಜನಿಕರು ಮೃತನ ಶವವನ್ನು ನೋಡಿದ್ದಾರೆ. ಮೃತನ ಎದೆಗೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿ ಗಟಾರದಲ್ಲಿ ಎಸೆದು ಹೋಗಿರುವುದು ಕಂಡು ಬಂದಿದೆ ಎಂದು ಸಿಪಿಐ ಪ್ರಭುಗೌಡ್ ಅವರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲಿಸರು ಪರಿಶೀಲನೆ ನಡೆಸಿದ್ದಾರೆ.
ಶಿರಶಿಯ ಡಿಎಸ್ಪಿ ರವಿ ನಾಯ್ಕ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದು, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ.