ಕಾಫಿ ಜೊತೆ ಚಿಕನ್‌ ಪೀಸ್‌ ಉಚಿತ: ಜೊಮಾಟೊ ಎಡವಟ್ಟು, ಗ್ರಾಹಕ ಸಿಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಸಮಯದ ಜೊತೆ ಮನುಷ್ಯನೂ ಹಿಂದೆ ಹಿಂದೆ ಓಡಬೇಕಾಗಿದೆ. ಉದ್ಯೋಗಸ್ಥ ಪುರುಷ ಮಹಿಳೆಯರಿಗೆ ತಿನ್ನಲೂ ಕೆಲವೊಮ್ಮೆ ಪುರುಸೊತ್ತಿಲ್ಲ, ಇಂಥವರಿಗಾಗಿಯೇ ಕೆಲ ಆನ್ಲೈನ್‌ ಫುಡ್‌ ಡೆಲಿವರಿ ಆಪ್‌ಗಳಿವೆ. ಇವುಗಳ ಮೂಲಕ ತಮಗಿಷ್ಟವಾದುದನ್ನು ಆರ್ಡರ್‌ ಮಾಡಿ ತರಿಸಿಕೊಳ್ಳುತ್ತಾರೆ. ಆದರೆ ಇತ್ತೀಚೆಗೆ ನಾವೊಂದು ಬುಕ್‌ ಮಾಡಿದ್ರೆ, ಇನ್ನೊಂದು ಬರುತ್ತದೆ. ಅಥವಾ ಆಹಾರದಲ್ಲಿ ಹಲ್ಲಿ, ಚೇಳು, ಹಾವಿನ ಚರ್ಮ, ಚಿಕನ್‌ ಪೀಸ್‌ ಕಾಣಸಿಕೊಳ್ಳುತ್ತದೆ. ಇಂಥದ್ದೊಂದು ಅನುಭವವನ್ನು ದೆಹಲಿ ಮೂಲದ ವ್ಯಕ್ತಿಯಬ್ಬರಿಗೆ ಆಗಿದ್ದು, ಆತ ಕೆಂಡಾಮಂಡಲರಾಗಿದ್ದಾರೆ.

ದೆಹಲಿ ಮೂಲಕ ಸುಮಿತ್‌ ದೆಹಲಿಯ ರೆಸ್ಟೋರೆಂಟ್‌ನಿಂದ Zomato ಮೂಲಕ ಕಾಫಿ ಆರ್ಡರ್ ಮಾಡಿದ್ದಾರೆ. ಮನೆಗೆ ಬಂದ ಕಾಫಿಯನ್ನು ಪತ್ನಿ ಜೊತೆ ಸೇರಿ ಕುಡಿದಿದ್ದಾರೆ. ಒಂದು ಸಿಪ್‌ ಕುಡಿಯವಷ್ಟರಲ್ಲಿ ಚಿಕನ್‌ ಪೀಸ್‌ ಸಿಕ್ಕಿದೆ. ಕಾಫಿ ಕಪ್ ನಲ್ಲಿ ಚಿಕನ್ ತುಂಡನ್ನು ನೋಡಿ ದಂಪತಿ ಬೆಚ್ಚಿಬಿದ್ದಿದ್ದಾರೆ. ನನ್ನ ಪತ್ನಿ ಸಸ್ಯಹಾರಿ ನಮಗೆ ಈ ರೀತಿ ಮಾಡಿದ್ದು ಸರಿಯಲ್ಲ ಎಂದು ಸುಮಿತ್ ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಫೋಟೋ ಹಂಚಿಕೊಂಡಿದ್ದಾರೆ.  “ನಾನು @zomato, irdthirdwaveindia ನಿಂದ ಕಾಫಿ ಆರ್ಡರ್ ಮಾಡಿದ್ದೇನೆ.  ಕಾಫಿಯಲ್ಲಿ ಚಿಕನ್ ತುಂಡು ಸಿಕ್ಕಿದ್ದು ದುರಂತವೇ ಸರಿ. ನಿಮ್ಮೊಂದಿಗಿನ ನನ್ನ ಒಡನಾಟವು ಇಂದು ಅಧಿಕೃತವಾಗಿ ಕೊನೆಗೊಂಡಿದೆ ”ಎಂದು ಶೀರ್ಷಿಕೆ ನೀಡಿದ್ದಾರೆ. ಈ ಪೋಸ್ಟ್ ನೋಡಿದ ನೆಟ್ಟಿಗರು ಜೊಮಾಟೊ ವಿರುದ್ಧ ಕಿಡಿಕಾರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!