ಹೊಸದಿಗಂತ ಡಿಜಿಟಲ್ ಡೆಸ್ಕ್:
ಉತ್ತರಪ್ರದೇಶದಲ್ಲಿ ರಸ್ತೆಯೊಂದನ್ನು ಕೀಳುತ್ತಾ ಕೂತಿರುವ ವ್ಯಕ್ತಿಯ ವಿಡಿಯೋ ವೈರಲ್ ಆಗಿದೆ. ಮೂರು ಕೋಟಿ ಎಂಬತ್ತು ಲಕ್ಷದಲ್ಲಿ ನಿರ್ಮಾಣವಾದ ರಸ್ತೆಯನ್ನು ಈ ವ್ಯಕ್ತಿ ಈರುಳ್ಳಿ ಸಿಪ್ಪೆ ರೀತಿ ಕೀಳುತ್ತಿದ್ದಾರೆ. ಈ ವಿಡಿಯೋವನ್ನು ಶುಭಂಕರ್ ಮಿಶ್ರಾ ಎನ್ನುವವರು ಅಪ್ಲೋಡ್ ಮಾಡಿದ್ದು, ಭ್ರಷ್ಟಾಚಾರದ ರಸ್ತೆಗಳು ಹೀಗೆ ಕಾಣುತ್ತವೆ ಎನ್ನುವ ಕ್ಯಾಪ್ಷನ್ ನೀಡಿದ್ದಾರೆ.
ಒಬ್ಬ ವ್ಯಕ್ತಿ ಎರಡು ಕೈ ಬಳಸಿ ರಸ್ತೆಯನ್ನು ಲೇಯರ್ಗಳಾಗಿ ಕೀಳುತ್ತಿದ್ದಾರೆ. ಈತ ರಸ್ತೆ ಕೀಳುವುದನ್ನು ಜನ ನೋಡುತ್ತಾ ನಿಂತಿದ್ದು, ಇದ್ಯಾವ ಸೀಮೆ ರಸ್ತೆ ಎಂದು ಬೈದುಕೊಂಡಿದ್ದಾರೆ. 249 ಸಾವಿರ ಮಂದಿ ಈ ವಿಡಿಯೋ ನೋಡಿದ್ದು, ಒಂದೇ ದಿನಕ್ಕೆ ರಸ್ತೆ ಕೈಗೆ ಬಂದರೆ ಹೇಗೆ ಎಂದು ಹೇಳಿದ್ದಾರೆ.
ये है ‘भ्रष्टाचार की सड़क’
– हाथों से उखड़ गई 3 करोड़ 80 लाख रूपए में बनी सड़क।
– यूपी के पीलीभीत जिले से सामने आया मामला। #UttarPradesh pic.twitter.com/RFR272rSxY— Shubhankar Mishra (@shubhankrmishra) November 13, 2022