ಯುವಕನ ಆವಿಷ್ಕಾರಕ್ಕೆ ಆನಂದ್‌ ಮಹೀಂದ್ರಾ ಫಿದಾ..! ಹಣ್ಣು ಕೀಳಲು ಹೊಸ ಉಪಕರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಹೀಂದ್ರಾ ಗ್ರೂಪ್ ಅಧ್ಯಕ್ಷ ಆನಂದ್‌ ಮಹೀಂದ್ರಾ ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳಿಗೆ ಸದಾ ಹೊಸ ಪ್ರತಿಭೆಗಳು ಮತ್ತು ಆವಿಷ್ಕಾರಗಳನ್ನು ಪರಿಚಯಿಸುವ ಕೆಲಸವನ್ನು ಮಾಡುತ್ತಿರುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಖತ್‌ ಆಕ್ಟಿವ್‌ ಆಗಿರುವ ಆನಂದ್‌ ಮಹೀಂದ್ರಾ ಪ್ರತಿದಿನ ಹೊಸ ಹೊಸ ವಿಚಾರಗಳನ್ನು ತಿಳಿಸಿಕೊಡುವ ಪ್ರಯತ್ನ ಮಾಡುತ್ತಾರೆ. ಆ ನಿಟ್ಟಿನಲ್ಲಿ ಒಬ್ಬ ವ್ಯಕ್ತಿ ಮರದಿಂದ ಸುಲಭವಾಗಿ ಹಣ್ಣು ಕೀಳುವ ಸಾಧನವನ್ನು ಪರಿಚಯಿಸಿದ್ದಾರೆ.

ಈ ಆವಿಷ್ಕಾರ ಭೂಮಿಯನ್ನ ನಡುಗಿಸುವಂಥದ್ದೇನೂ ಅಲ್ಲ, ಆದರೂ ನಾನು ಬೆಳೆಯುತ್ತಿರುವ ʻಟಿಂಕರಿಂಗ್‌ʼ ಸಂಸ್ಕೃತಿ ಬಗ್ಗೆ ಉತ್ಸುಕನಾಗಿದ್ದೇನೆ. ಅಮೆರಿಕಾ ಹೊಸ ಆವಿಷ್ಕಾರಗಳಿಗೆ ಹೆಸರುವಾಸಿಯಾಗಿದೆ. ಯಾಕೆಂದರೆ ಹೊಸ ಹೊಸ ಪ್ರಯತ್ನಗಳು ಅಲ್ಲಿನ ಬೇಸ್‌ಮೆಂಟ್‌ ಹಾಗೂ ಗ್ಯಾರೇಜ್‌ಗಳಿಂದಲೇ ಹುಟ್ಟಿಕೊಂಡಿವೆ. ಮುಂದೊಂದು ದಿನ ʻಟಿಂಕರ್‌ಗಳು ಹೊಸ ಆವಿಷ್ಕಾರಗಳ ಟೈಟಾನ್ಸ್‌ʼ ಆಗಬಹುದು ಎಂದು ಅವರು ವೀಡಿಯೊಗೆ ಶೀರ್ಷಿಕೆ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!