Sunday, August 14, 2022

Latest Posts

500 ರೂ. ನೋಟು ಎಸೆದು ವ್ಯಕ್ತಿಯೊಬ್ಬರ ಗಮನ ಬೇರೆಡೆ ಸೆಳೆದು 1.5 ಲಕ್ಷ ರೂ. ದೋಚಿದ ಖದೀಮ!

ಹೊಸದಿಗಂತ ವರದಿ, ಮೈಸೂರು:

ಬ್ಯಾಂಕ್‌ನಿoದ ಹಣ ಡ್ರಾ ಮಾಡಿಕೊಂಡು ಹೊರ ಬಂದ ವ್ಯಕ್ತಿಯೊಬ್ಬರ ಗಮನ ಬೇರೆಡೆಗೆ ಸೆಳೆದ ದುಷ್ಕರ್ಮಿ ಸೆಳೆದು ಸಿನಿಮೀಯ ಮಾದರಿಯಲ್ಲಿ ಅವರ ಬಳಿಯಿದ್ದ 1.5 ಲಕ್ಷ ರೂ. ಲಪಟಾಯಿಸಿ ಪರಾರಿಯಾದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರದಲ್ಲಿ ನಡೆದಿದೆ. ಹುಣಸೂರಿನ ಕಲ್ಕುಣಿಕೆಯ ನಿವಾಸಿ ಗಣೇಶ್ ಹಣ ಕಳೆದುಕೊಂಡವರು.

ಇವರು ಕೆ.ಆರ್.ನಗರದ ನವ ನಗರ ಅರ್ಬನ್ ಕೋ ಆಪರೇಟಿವ್ ಬ್ಯಾಂಕಿನಲ್ಲಿ ಹಣ ಡ್ರಾ ವಾಡಿಕೊಂಡ ನಂತರ ಅಂಚೆ ಕಚೇರಿಗೆ ತೆರಳಿ ಕೆಲಸ ಮುಗಿಸಿ ಸಿ.ಎಂ.ರಸ್ತೆಯಲ್ಲಿರುವ ಶ್ರೀ ಹೋಟೆಲ್ ಬಳಿ ಆಗಮಿಸಿ ಚಹಾ ಕುಡಿದ ನಂತರ ತಮ್ಮ ಬೈಕ್ ಬಳಿ ಬಂದು ಹೆಲ್ಮೆಟ್ ಧರಿಸುತ್ತಿದ್ದ ಅವರನ್ನು ಅಪರಿಚಿತ ವ್ಯಕ್ತಿಯೊಬ್ಬ ಮಾತನಾಡಿಸಿ 500 ರೂ. ನೋಟು ಎಸೆದು ನಿಮ್ಮ ದುಡ್ಡು ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾನೆ.

ಈ ಸಂದರ್ಭದಲ್ಲಿ ದುಡ್ಡು ಎತ್ತಿಕೊಳ್ಳಲು ಗಣೇಶ್ ಮುಂದಾದಾಗ ಬೈಕ್‌ನ ಟ್ಯಾಂಕ್ ಕವರ್‌ನಲ್ಲಿ ಇದ್ದ 1.50 ಲಕ್ಷ ರೂ. ಎಗರಿಸಿಕೊಂಡು ಪರಾರಿಯಾಗಿದ್ದಾನೆ. ಘಟನೆ ಸಂಬoಧ ಕೆ.ಆರ್.ನಗರ ಠಾಣೆಯಲ್ಲಿ ದೂರು ದಾಖಲಾಗಿದ್ದು, ಖದೀಮನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss