ವಿಮಾನದಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ವ್ಯಕ್ತಿ ಮೂತ್ರ ವಿಸರ್ಜನೆ: ವರದಿ ಕೇಳಿದ ಡಿಜಿಸಿಎ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಏರ್ ಇಂಡಿಯಾ ಯುಎಸ್ ಫ್ಲೈಟ್‌ನಲ್ಲಿ ಅಮಲೇರಿದ ವ್ಯಕ್ತಿಯೊಬ್ಬ ಬ್ಯುಸಿನೆಸ್ ಕ್ಲಾಸ್ ಸೀಟಿನಲ್ಲಿ ಕುಳಿತಿದ್ದ ಹಿರಿಯ ಮಹಿಳಾ ಸಹ-ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ವಿಮಾನಯಾನ ಸಂಸ್ಥೆಯಿಂದ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಘಟನೆಯ ವರದಿಯನ್ನು ಕೇಳಿದೆ.

ನಾವು ಏರ್‌ಲೈನ್‌ನಿಂದ ವರದಿಯನ್ನು ಕೇಳಿದ್ದು, ಮತ್ತು ನಿರ್ಲಕ್ಷ್ಯ ತೋರಿದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಡಿಜಿಸಿಎ ಬುಧವಾರ ತಿಳಿಸಿದೆ. ಏರ್ ಇಂಡಿಯಾ ನವೆಂಬರ್ 26 ರಂದು ನ್ಯೂಯಾರ್ಕ್‌ನ ಜಾನ್ ಎಫ್ ಕೆನಡಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ದೆಹಲಿಗೆ ತೆರಳುತ್ತಿದ್ದಾಗ ಸಂಭವಿಸಿದ ಘಟನೆಯ ಬಗ್ಗೆ ಪೊಲೀಸ್ ದೂರು ದಾಖಲಿಸಿದೆ.

ಪ್ರಕರಣವನ್ನು ಸರ್ಕಾರ ನೇಮಿಸಿದ ಸಮಿತಿಗೆ ತನಿಖೆಗಾಗಿ ಕಳುಹಿಸಲಾಗಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!