ಲಗೇಜ್‌ ನಲ್ಲಿ ʼಬಾಂಬ್‌ʼ ಇದೆಯೆಂದು ಹೇಳಿ ಏರ್ ಪೋಟ್೯ನಲ್ಲಿ ಏಕಾಏಕಿ ಭಯಹುಟ್ಟಿಸಿದ ಭೂಪ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 
ಲಗೇಜ್‌ ನಲ್ಲಿ ಏನಿದೆ ಎಂದು ವಿಮಾನ ನಿಲ್ದಾಣ ಸಿಬ್ಬಂದಿ ಕೇಳಿದ ಪ್ರಶ್ನೆಗೆ ʼಬಾಂಬ್‌ ಇದೆʼ ಎಂದು ಉತ್ತರಿಸಿ ವ್ಯಕ್ತಿಯೊಬ್ಬ  ಕೋಲಾಹಲ ಸೃಷ್ಟಿಸಿದ ಘಟನೆ ಕೊಚ್ಚಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಆ ಬಳಿಕ ವ್ಯಕ್ತಿ ಮತ್ತು ಆತನ ಪತ್ನಿಯನ್ನು ಬಂಧಿಸಿ, ಜಾಮೀನ ಮೇಲೆ ಬಿಡುಗಡೆ ಮಾಡಲಾಗಿದೆ.
ವಿದೇಶಕ್ಕೆ ಹೋಗುತ್ತಿದ್ದ ದಂಪತಿಗಳು ಶನಿವಾರ ಮಧ್ಯರಾತ್ರಿ 1.30 ರ ಸುಮಾರಿಗೆ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಚೆಕ್-ಇನ್ ಕೌಂಟರ್‌ನಲ್ಲಿರುವ ಸಿಬ್ಬಂದಿ ಆತನ ಲಗೇಜ್‌ನಲ್ಲಿ ಏನಿದೆ ಎಂದು ವಿಚಾರಿಸಿದಾಗ, ಸಿಟ್ಟಿಗೆದ್ದ ವ್ಯಕ್ತಿ “ಬಾಂಬ್” ಎಂದು ಉತ್ತರಿಸಿದ್ದಾನೆ. ಇದರಿಂದಾಗಿ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.  ತಕ್ಷಣವೇ ಈ ವಿಚಾರವನ್ನು ವಿಮಾನ ನಿಲ್ದಾಣದ ಭದ್ರತೆಗೆ ತಿಳಿಸಲಾಯಿತು.
ಅವರನ್ನು ನೆಡುಂಬಶ್ಶೇರಿ ಪೊಲೀಸರಿಗೆ ಒಪ್ಪಿಸಲಾಗಿದೆ. ವ್ಯಕ್ತಿಯನ್ನು ಬಂಧಿಸಿ ನಂತರ ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಶನಿವಾರ ಮುಂಜಾನೆ ವಿಮಾನವನ್ನು ಹತ್ತಲು ವ್ಯಕ್ತಿ ಮತ್ತು ಆತನ ಪತ್ನಿಗೆ  ಹತ್ತಲು ಅವಕಾಶ ನೀಡಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!