Thursday, June 30, 2022

Latest Posts

ಮನೆಯಿಂದ ಹೊರಗೆ ಹೋದ ವ್ಯಕ್ತಿ ನಾಪತ್ತೆ

ಹೊಸದಿಗಂತ ವರದಿ, ಮೈಸೂರು:

ಮನೆಯಿಂದ ಹೊರಗೆ ಹೋದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಮೈಸೂರಿನ ರಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ನಿವಾಸಿ ಸಂತೋಷ್ (35) ನಾಪತ್ತೆಯಾದವ. ಡಿ. 7 ರಂದು ರಾತ್ರಿ 9-30 ಗಂಟೆ ಸಮಯದಲ್ಲಿ ಯಾವುದೋ ಫೋನ್ ಕಾಲ್ ಬಂದಿದ್ದು, ಫೋನಿನಲ್ಲಿ ಮಾತನಾಡಿಕೊಂಡು ಮನೆಯಿಂದ ಹೊರಗೆ ಹೋದವನು ಇದುವರೆಗೂ ವಾಪಸ್ಸು ಬಂದಿಲ್ಲ.
ಸಂತೋಷ್ ಸಾಧರಣ ಮೈಕಟ್ಟು, ಎಣ್ಣೆಗಂಪು ಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದ ಬನಿಯನ್ ಮತ್ತು ಮರೂನ್ ಬಣ್ಣದ ಶಾರ್ಟ್ಸ್ ಧರಿಸಿರುತ್ತಾರೆ.  ಸುಮಾರು 5.4 ಅಡಿ‌ ಎತ್ತರ, ಕನ್ನಡ ಭಾಷೆ ಮಾತನಾಡುತ್ತಾನೆ. ಈತನ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ:0821-2444955, ಎಸ್‌ಪಿ ಅವರ ದೂ.ಸಂ. 0821-2520040 ಹಾಗೂ ಮೈಸೂರು ಜಿಲ್ಲಾ ಕಂಟ್ರೋಲ್ ರೂಂ ದೂ.ಸಂ. 0821-2444800ನ್ನು ಸಂಪರ್ಕಿಸುವAತೆ ಮೈಸೂರು ದಕ್ಷಿಣ ಪೊಲೀಸ್ ಠಾಣೆಯ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss