ದೇವಾಲಯದ ಆನೆ ಸಾವು: ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಗೌರವ ನಮನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪ್ರಸಿದ್ಧ ದೇವಾಲಯಗಳಲ್ಲಿರುವ ಆನೆಗಳು ಬಹಳ ವಿಶೇಷವಾದವುಗಳಾಗಿವೆ. ದೇವಸ್ಥಾನದಲ್ಲಿ ಭಗವಂತನಲ್ಲಿ ಎಷ್ಟು ಭಕ್ತಿಯಿರುತ್ತದೋ ಅಷ್ಟೇ ಭಕ್ತಿಯಿಂದ ಭಕ್ತರು ಪೂಜಿಸುತ್ತಾರೆ. ದೇವಸ್ಥಾನಕ್ಕೆ ಸೇರಿದ ಆನೆಗಳು ಸತ್ತರೆ ಸಂಪ್ರದಾಯದಂತೆ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಪುದುಚೇರಿಯ ದೇವಸ್ಥಾನವೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಪುದುಚೇರಿಯ ಮನಕುಲ ವಿನಾಯಕ ದೇವಸ್ಥಾನದ ‘ಲಕ್ಷ್ಮಿ’ ಆನೆ ಸಾವನ್ನಪ್ಪಿದ್ದು, ಲಕ್ಷ್ಮಿಯನ್ನು ನೋಡಲು ಮತ್ತು ಹರಕೆ ತೀರಿಸಲು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು. ತೆಲಂಗಾಣ ರಾಜ್ಯಪಾಲೆ ತಮಿಳಿಸೈ ಕೂಡಾ ಲಕ್ಷ್ಮಿ ಕಂಡರೆ ಅಪಾರ ಪ್ರೀತಿ. ಹೀಗಾಗಿ ಸ್ವತಃ ತಮಿಳಿಸೈ ಪುದುಚೇರಿಯ ಮನಕುಲ ವಿನಾಯಕ ದೇವಸ್ಥಾನಕ್ಕೆ ತೆರಳಿ ಲಕ್ಷ್ಮಿಗೆ ನಮನ ಸಲ್ಲಿಸಿದರು.

ಮನಕುಲ ವಿನಾಯಕ ದೇವಾಲಯವು ಪುದುಚೇರಿಯಲ್ಲಿ ಅತ್ಯಂತ ಪ್ರಸಿದ್ಧವಾಗಿದೆ. 1955 ರಲ್ಲಿ ದಾನಿಗಳು ಈ ದೇವಾಲಯಕ್ಕೆ ಐದು ವರ್ಷದ ಆನೆ ಮರಿಯೊಂದನ್ನು ಉಡುಗೊರೆಯಾಗಿ ನೀಡಿದ್ದರು. ದೇವಸ್ಥಾನದ ಆಡಳಿತ ಮಂಡಳಿ ಅದಕ್ಕೆ ಲಕ್ಷ್ಮಿ ಎಂದು ಹೆಸರಿಟ್ಟು ಅಂದಿನಿಂದ, ದೇವಾಲಯದ ಸೇವೆಗಳಲ್ಲಿ ಭಾಗವಹಿಸುವ ಭಕ್ತರಿಗೆ ಲಕ್ಷ್ಮಿ ತುಂಬಾ ಹತ್ತಿರವಾಗಿದ್ದಳು. ಆಶೀರ್ವಾದ ಪಡೆಯದೆ, ಲಕ್ಷ್ಮಿಯನ್ನು ನೋಡದೆ ಭಕ್ತರು ಹೋಗುವುದಿಲ್ಲ. ಈ ನಡುವೆ ವೇಳೆ ಲಕ್ಷ್ಮಿ ಕಾಲಿಗೆ ಗಾಯವಾಗಿ ಅದು ಅಲ್ಸರ್ ಆಗಿ ಮಾರ್ಪಟ್ಟಿತು. ಆ ಹುಣ್ಣಿನಿಂದ ಲಕ್ಷ್ಮಿ ತುಂಬಾ ನರಳಿದ್ದು, ಚಿಕಿತ್ಸೆ ನೀಡಿದರೂ ಯಾವುದೇ ಫಲಿತಾಂಶ ಸಿಗದೆ ಸಾವನ್ನಪ್ಪಿದ್ದಾಳೆ.

ಆನೆ ಅಂತಿಮ ದರ್ಶನ ಪಡೆಯಲು ಅಪಾರ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನದ ಮುಂದೆ ಜಮಾಯಿಸಿದ್ದರು. ಲಕ್ಷ್ಮಿ ಸಾವಿನ ಸುದ್ದಿ ತಿಳಿದ ತೆಲಂಗಾಣ ರಾಜ್ಯಪಾಲರು, ಪುದುಚೇರಿ ಉಸ್ತುವಾರಿ ಲೆಫ್ಟಿನೆಂಟ್ ಗವರ್ನರ್ ತಮಿಳಿಸೈ ಸೌಂದರರಾಜನ್ ಅವರು ಲಕ್ಷ್ಮಿ ಬಳಿ ಆಗಮಿಸಿ ಗೌರವ ಸಲ್ಲಿಸಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!