Sunday, August 14, 2022

Latest Posts

ಮನಪಾ ಚುನಾವಣೆ: ಕಾಂಗ್ರೆಸ್ -ಸ್ವತಂತ್ರ ಪಕ್ಷದ ಅಭ್ಯರ್ಥಿಗಳ ನಡುವೆ ಹೊಯ್ ಕೈ

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ಹೊಸ ದಿಗಂತ ವರದಿ, ಕಲಬುರಗಿ:

ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷ ಹಾಗೂ ಸ್ವತಂತ್ರ ಪಕ್ಷದ ಅಭ್ಯರ್ಥಿಗಳ ನಡುವೆ ಗಲಾಟೆ ನಡೆದಿದೆ. ವಾರ್ಡ್ ನಂ-13ರಲ್ಲಿ ನಕಲಿ ಮಾತದಾನಕ್ಕೆ ಮತದಾರರನ್ನು ಕರೆದುಕೊಂಡು ಬಂದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ.
ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಅಜರುದ್ದಿನ ಅವರು ನಕಲಿ ಮತದಾರರನ್ನು ಕರೆದುಕೊಂಡು ಬರುತ್ತಿದ್ದರು ಎಂಬ ಆರೋಪ ಮಾಡಿ, ಇದಕ್ಕೆ ಆಕ್ಷೆಪ ವ್ಯಕ್ತಪಡಿಸಿ,ಸ್ವತಂತ್ರ ಅಭ್ಯರ್ಥಿ ಇಕ್ಬಾಲ್ ಅಹ್ಮದ್ ಜೊತೆಯಲ್ಲಿ ಗಲಾಟೆ ಉಂಟಾಗಿದೆ.
ಈ ಸಂದರ್ಭ  ಸ್ವತಂತ್ರ ಅಭ್ಯರ್ಥಿಯ ಪುತ್ರ, ಮೊಹ್ಮದ್ ಶೋಹೇಬ್ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಅಜರುದ್ದಿನ ಅವರಿಂದ ಹಲ್ಲೆ ನಡೆದಿದೆ.
ಈ ಸಂಭಂದದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ಮಹ್ಮದ್ ಶೋಯಿಬ್ ಅವರನ್ನು ದಾಖಲು ಮಾಡಿದ್ದಾರೆ. ಸಧ್ಯ ಪರಿಸ್ಥಿತಿಯನ್ನು ಪೋಲಿಸರು ತಿಳಿಗೊಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss