Saturday, July 2, 2022

Latest Posts

ಮಂಡ್ಯದ ಖದರ್‌ರೇ ಬೇರೆ: ನಟ ಶ್ರೀಮುರಳಿ

ಹೊಸದಿಗಂತ ವರದಿ ಮಂಡ್ಯ:

ಮಂಡ್ಯದ ಖದರ್‌ರೇ ಬೇರೆ, ಇಲ್ಲಿರುವ ಅಭಿಮಾನಿಗಳ ರೀತಿ ನೀತಿಗಳೂ ಬೇರೆಯೇ ಆಗಿದೆ. ಆದರೆ ನಾವು ಮಾತ್ರ ಯಾವುದೇ ಬೇಧ ಭಾವ ಮಾಡದೆ ಎಲ್ಲಾ ಅಭಿಮಾನಿಗಳನ್ನೂ ಒಂದೇ ರೀತಿ ನೋಡುತ್ತೇವೆ. ಒಂದೇ ರೀತಿಯಲ್ಲಿ ಗೌರವಿಸುತ್ತೇವೆ ಎಂದು ಮದಗಜ ಚಿತ್ರದ ನಾಯಕ ನಟ ಶ್ರೀಮುರಳಿ ತಿಳಿಸಿದರು.
ನಗರದ ಸಂಜಯ ಚಿತ್ರಮಂದಿರಕ್ಕೆ ಭೇಟಿ ನೀಡಿ ಅಭಿಮಾನಿಗಳೊಂದಿಗೆ ಚಿತ್ರ ವೀಕ್ಷಿಸಿದ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಅಭಿಮಾನಿಗಳ ದರ್ಶನಕ್ಕಾಗಿ ನಾವು ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದೇವೆ. ಅಭಿಮಾನಿಗಳು ದರ್ಶನ ಕೊಟ್ಟಷ್ಟು ನೆಮ್ಮದಿಯಾರುತ್ತೇವೆ ಎಂದು ಹೇಳಿದರು.
ಕೋವಿಡ್ ಮಾರ್ಗಸೂಚಿಯಿಂದಾಗಿ ಚಿತ್ರೋದ್ಯಮಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿತ್ತುಘಿ. ಮಧ್ಯದಲ್ಲಿ ಕೆಲ ಕಾಲ ಸ್ಥಗಿತಗೊಂಡಿತ್ತು. ಚಿತ್ರಪ್ರದರ್ಶನ ಪ್ರಾರಂಭವಾದರೂ ವಾಪಸ್ಸು ಕಳುಹಿಸಿದ್ದರು. ದೇವರ ದಯೆಯಿಂದ ಎಲ್ಲವೂ ಸರಿಯಾಯಿತು. ಪರವಾಗಿಲ್ಲಘಿ. ಯಶಸ್ವಿಯಾಗಿ ಚಿತ್ರ ಪ್ರದರ್ಶನ ನಡೆಯುತ್ತಿದೆ. ದೇವರು ಎಷ್ಟು ಕೊಡುತ್ತಾನೋ ಅದಕ್ಕೆ ನಮಗೆ ತೃಪ್ತಿ ಇದೆ. ಅಭಿಮಾನಿ ದೇವರುಗಳು ಏನು ಕೊಟ್ಟರೂ ಆಶೀರ್ವಾದವೇ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಅಪ್ಪು ಅವರಿಗೂ ಅಭಿಮಾನಿಗಳ ಆಶೀರ್ವಾದ, ಪ್ರೀತಿ ಸದಾ ಇರುತ್ತೆಘಿ. ಮರೆಯುವ ಹಾಗಿಲ್ಲಘಿ. ನಾವು ಇರೋದೂ ಇಲ್ಲಘಿ. ಅವರು ಆಶೀರ್ವಾದ ಮಾಡಿದ್ದಾರೆ. ನಮ್ಮ ಸುತ್ತಲೂ ಇದ್ದಾರೆ ಎಂದರು.
ಅಪ್ಪು ಅವರೇ ನಮಗೆ ಶಕ್ತಿ. ನಾವೆಲ್ಲ ಅಭಿಮಾನಿ ದೇವರಗಳನ್ನೇ ನಂಬಿ ಬದುಕಿದವರು. ಅವರು ಖುಷಿಯಾಗಿರಬೇಕು. ಅವರು ಚೆನ್ನಾಗಿರಬೇಕು. ಅಪ್ಪು ಮಾಮನನ್ನು ಯಾರೂ ಮರೆಯಬಾರದು. ಅವರನ್ನೇ ನೆನೆದು ಕಾರ‌್ಯ ಆರಂಭ ಮಾಡಬೇಕು. ಈ ಚಿತ್ರ ತುಂಬಾ ಚೆನ್ನಾಗಿ ಬಂದಿದೆ. ಇದಕ್ಕಾಗಿ ನಾನು ನಿರ್ದೇಶಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.
ಮದಗಜ ಚಿತ್ರದಲ್ಲಿ ಕೆಲವು ಕಡೆ ಅತ್ತಿದ್ದೇನೆ. ಕೋಪಿಸಿಕೊಂಡಿದ್ದೇನೆ. ನಕ್ಕಿದ್ದೇನೆ. ಅಪ್ಪ-ಅಮ್ಮನ ಸಂಬಂಧ ಸೇರಿದಂತೆ ಬೇರೆ ಬೇರೆ ರೀತಿಯ ಸನ್ನಿವೇಶಗಳಿವೆ. ಚಿತ್ರ ವಿಭಿನ್ನವಾಗಿ ಮೂಡಿಬಂದಿದೆ. ಎಂತಹ ತಾಯಿಗೂ ಮಕ್ಕಳ ಬಗ್ಗೆ ಕರುಳು ಚುರುಕ್ ಎನ್ನುತ್ತದೆ. ಅದೇ ರೀತಿ ಮಕ್ಕಳಿಗೂ ಅಮ್ಮನ ಬಗ್ಗೆ ಹೃದಯ ಮುಟ್ಟುತ್ತೆಘಿ. ಇದರಲ್ಲಿ ಒಂದು ಸಂದೇಶವೂ ಇದೆ. ಒಂದು ಅಳತೆಗೆ ಚಿತ್ರವನ್ನು ಚೆನ್ನಾಗಿಯೇ ಮಾಡಿದ್ದೇವೆ. ಒಳ್ಳೆಯ ಸಿನಿಮಾ. ಅಭಿಮಾನಿ ದೇವರುಗಳಿಗೆ ಇಷ್ಟ ಆಗಿದೆ ಎಂದು ವಿವರಿಸಿದರು.
ಪುನೀತ್ ಸಾಧನೆಗೆ ಗೌರವ ಅಗತ್ಯ. ಅವರನ್ನು ಗೌರವಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯವೂ ಆಗಿದೆ. ಅಭಿಮಾನಿಗಳು ಹೇಳಿರುವುದೂ ನ್ಯಾಯೋಚಿತವಾಗಿಯೇ ಇದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ನಗರದ ಬೆಂಗಳೂರು-ಮೈಸೂರು ಹೆದ್ದಾರಿಯಿಂದ ವಿ.ವಿ. ರಸ್ತೆ, 100 ಅಡಿ ರಸ್ತೆಯವರೆಗೂ ಅಭಿಮಾನಿಗಳೊಂದಿಗೆ ಬೈಕ್ ರ್ಯಾಲಿ ನಡೆಸಿದರು. ಈ ದೃಶ್ಯವನ್ನು ಕಂಡ ಅಭಿಮಾನಿಗಳು ಹುಚ್ಚೆದ್ದು ಕುಣಿದು ಕುಪ್ಪಳಿಸಿದರು. ಶಿಳ್ಳೆ, ಕರತಾಡನ ಹೆಚ್ಚಾಗಿತ್ತುಘಿ.
ನಿರ್ದೇಶಕ ಮಹೇಶ್‌ಕುಮಾರ್, ಖಳನಾಯಕ ಗರುಡರಾಮ್, ಮುಖಂಡರುಗಳಾದ ದ್ಯಾಪಸಂದ್ರ ಸ್ವಾಮಿ, ತಗ್ಗಹಳ್ಳಿ ಚಂದ್ರೇಗೌಡ, ಕೆರಗೋಡು ಮಹೇಶ್ ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss