ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Wednesday, August 4, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಮಂಡ್ಯ | ಸಾರಿಗೆ ನೌಕರರಿಂದ ತಟ್ಟೆ-ಲೋಟ ಚಳವಳಿ: ಕೆಟಿಎಸ್, ರೈತಸಂಘ ಬೆಂಬಲ

ಹೊಸದಿಗಂತ ವರದಿ, ಮಂಡ್ಯ:

ಸಾರಿಗೆ ನಿಗಮದ ನೌಕರರಿಗೆ 6ನೇ ವೇತನ ಜಾರಿಗಾಗಿ ರಾಜ್ಯಪಾಲರು ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ನೊಂದ ಸಾರಿಗೆ ನೌಕರರು ಹಾಗೂ ಕುಟುಂಬಸ್ಥರು ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನೇತೃತ್ವದಲ್ಲಿ ನಗರದ ಸರ್ ಎಂ.ವಿ. ಪ್ರತಿಮೆ ಎದುರು ತಟ್ಟೆ-ಲೋಟ ಚಳವಳಿ ನಡೆಸಿದರು.

ಸರ್ ಎಂ.ವಿ. ಪ್ರತಿಮೆ ಎದುರು ಜಮಾಯಿಸಿದ ಸಾರಿಗೆ ನೌಕರರು ತಮ್ಮ ಮಕ್ಕಳು ಹಾಗೂ ಕುಟುಂಬಸ್ಥರ ಜೊತೆಗೂಡಿ ಧರಣಿ ನಡೆಸಿ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ ಮುಷ್ಕರದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಅಧೀಕೃತವಾಗಿ ಮೂರು ತಿಂಗಳಲ್ಲಿ ಸಾರಿಗೆ ನಿಗಮದ ನೌಕರರಿಗೆ 6ನೇ ವೇತನ ಜಾರಿಗೆ ತರುತ್ತೇವೆ. ಹಾಗೂ 8 ಬೇಡಿಕೆಗಳನ್ನು ಈಡೇರಿಸುತ್ತೇವೆ ಎಂದು ಘೋಷಣೆ ಮಾಡಿ ಜಾರಿ ಮಾಡುವುದು ತಡವಾದ ಕಾರಣ ನೌಕರರು ಕಾನೂನು ಪ್ರಕಾರ ಮನವಿ ಪತ್ರ ಸಲ್ಲಿಸಿದರೂ ಕೂಡ ಸ್ಪಂಧಿಸಿಲ್ಲ ಎಂದು ಆರೋಪಿಸಿದರು.

ನ್ಯಾಯ ಕೇಳಲು ಹೋದರೆ ನೌಕರರ ಮೇಲೆ ದಬ್ಬಾಳಿಕೆ, ದೌರ್ಜನ್ಯ ಮಾಡಿ ವರ್ಗಾವಣೆ, ವಜಾ, ಅಮಾನತ್ತು ನೋಟೀಸ್ ನೀಡುವ ಕೆಲಸ ಮಾಡಿ ಹೆದುರಿಸುತ್ತಿದೆ. ಮುಷ್ಕರ ಆರಂಭವಾಗಿ 6ನೇ ದಿನ ಪೂರ್ಣಗೊಳ್ಳುತ್ತಾ ಬಂದಿದ್ದರೂ, ಸೌಜನ್ಯಕ್ಕಾದರೂ ಕರೆದು ಸಮಸ್ಯೆ ಬಗೆಹರಿಸುವ ಕೆಲಸ ಮಾಡದೆ ಕಾನೂನು ಬಾಹಿರವಾಗಿ ನಡೆದುಕೊಳ್ಳುತ್ತಿದೆ ಎಂದು ದೂರಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss