ಮಂಗಳೂರನ್ನು ಮತ್ತೆ ಹೈರಾಣಾಗಿಸಿದ ಮಳೆ : ತಗ್ಗು ಪ್ರದೇಶಗಳಿಗೆ ನೆರೆ ಭೀತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಭಾರೀ ಮಳೆಗೆ ಮಂಗಳೂರು ಮತ್ತೆ ಹೈರಾಣಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಜಡಿಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತವಾಗುತ್ತಿದ್ದರೆ, ಹಲವೆಡೆ ವಸತಿಗೃಹಗಳಿಗೆ ಮಳೆ ನೀರು ನುಗ್ಗುತ್ತಿರುವ ಬಗ್ಗೆ ವರದಿಯಾಗುತ್ತಿದೆ.
ಮುಂಜಾಗ್ರತಾ ಕ್ರಮವಾಗಿ ಇಂದು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಲಾಗಿದೆ.

ಎಲ್ಲೆಲ್ಲಿ‌ ಸಂಕಷ್ಟ?
ನಗರದ ಕುಲಶೇಖರದ ಬಜ್ಜೋಡಿಯಲ್ಲಿ ವರ್ಕ್ ಶಾಪ್ ಗೆ ಮಳೆ ನೀರು ನುಗ್ಗಿದ್ದು, ಅಪಾರ ನಷ್ಟ ಉಂಟಾಗಿದೆ.
ಬಿಕರ್ನಕಟ್ಟೆಯಲ್ಲಿ ಮನೆಗೆ ಕಾಂಪೌಡ್ ಕುಸಿದು ಬಿದಿದ್ದು, ಮನೆಗೆ ಸಾವಿರಾರು ರೂ. ಹಾನಿಯಾಗಿದೆ. ಕೈಬರ್ ಪಾಸ್ ಮೇಲ್ಗಡೆ ಕೋರ್ಟ್ ರಸ್ತೆಯಲ್ಲಿ , ಅದರಲ್ಲಿ ಭೂಕುಸಿತ ಆರಂಭವಾಗಿದ್ದು ಆತಂಕ ಮೂಡಿಸಿದೆ. ರಸ್ತೆಗಳಲ್ಲಿಯೂ ಮಳೆ ನೀರು ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!