Tuesday, June 28, 2022

Latest Posts

ಬಾಯಲ್ಲಿ ನೀರೂರಿಸುವ ಮಾವಿನ ಹಣ್ಣು ನೀರುಗೊಜ್ಜು… ಹೇಗೆ ಮಾಡುವುದು ನೋಡಿ…

ಮಾವಿನ ಹಣ್ಣಿನಿಂದ ನಾನಾ ರೀತಿ ಅಡುಗೆಗಳನ್ನು ಮಾಡಬಹುದು. ಅದರಲ್ಲಿ ಬಹಳ ರುಚಿಯಾದ, ಸುಲಭದ ಅಡುಗೆ ಎಂದರೆ ಮಾವಿನ ಹಣ್ಣಿನ ನೀರುಗೊಜ್ಜು. ಬಿಸಿ ಬಿಸಿ ಅನ್ನದ ಜೊತೆ ಈ ನೀರುಗೊಜ್ಜು ಬಹಳ ರುಚಿಯಾಗುತ್ತದೆ. ಹೇಗೆ ಮಾಡುವುದು ನೋಡಿ…

ಬೇಕಾಗುವ ಸಾಮಗ್ರಿ:

ಮಾವಿನ ಹಣ್ಣು
ಬೆಲ್ಲ
ಉಪ್ಪು
ಕರಿಬೇವು
ಸಾಸಿವೆ
ಉದ್ದಿನ ಬೇಳೆ
ಇಂಗು
ಎಣ್ಣೆ
ಬೆಳ್ಳುಳ್ಳಿ
ಹಸಿ ಮೆಣಸು
ಒಣ ಮೆಣಸು

ಮಾಡುವ ವಿಧಾನ:

  • ಮೊದಲಿಗೆ ಸ್ವಲ್ಪ ಹುಳಿ ಇರುವ ಮಾವಿನ ಹಣ್ಣನ್ನು ತೆಗೆದುಕೊಂಡು ಕೈಯಿಂದ ಕಿವುಚಿಕೊಳ್ಳಿ.
  • ನಂತರ ಅದಕ್ಕೆ ಬೆಲ್ಲ, ಉಪ್ಪು ಹಾಕಿ 10 ನಿಮಿಷ ನೆನೆಸಿಡಿ.
  • ಎಣ್ಣೆ, ಬೆಳ್ಳುಳ್ಳಿ, ಉದ್ದಿನ ಬೇಳೆ, ಸಾಸಿವೆ, ಕರಿಬೇವು, ಒಣ ಮೆಣಸು, ಹಸಿಮೆಣಸು ಹಾಕಿ ಒಗ್ಗರಣೆ ಮಾಡಿದರೆ ನೀರುಗೊಜ್ಜು ರೆಡಿ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss