RECIPE| ತೋತಾಪುರಿಯ ತೊಕ್ಕು ಯಾರು ತಾನೆ ಮರೆಯಲು ಸಾಧ್ಯ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಾವು ಎಂದಾಗ ಬಾಯಲ್ಲಿ ನೀರೂರುವುದು ಸಹಜ.. ಮಾವಿನ ಕಾಯಿಯ ಚಟ್ನಿ ಅಥವಾ ತೊಕ್ಕಂತೂ ಅಕ್ಷರಶಃ ನಾಲಗೆಯಲ್ಲಿ ನೀರು ಸೂಸುವಂತೆ ಮಾಡುತ್ತದೆ. ರುಚಿಯಾದ ತೊಕ್ಕು ಹೀಗೆಮಾಡಿ ನೋಡಿ.

ಬೇಕಾಗುವ ಸಾಮಾಗ್ರಿಗಳು: ತೋತಾಪುರಿ ಮಾವಿನ ಕಾಯಿ 2, 10 ಒಣಮೆಣಸಿನಕಾಯಿ , ಸಣ್ಣತುಂಡು ಬೆಲ್ಲ, ರುಚಿಗೆ ತಕ್ಕಷ್ಟು ಕಲ್ಲುಪ್ಪು, ಎರಡು ಟೀ ಸ್ಪೂನ್‌ ಜೀರಿಗೆ, ಒಂದು ಚಮಚ ಇಂಗು, ನಾಲ್ಕೆಸಳು ಬೆಳ್ಳುಳ್ಳಿ, ಒಂದು ಕಪ್‌ ತೆಂಗಿನ ತುರಿ.

ಹೀಗೆ ಮಾಡಿ: ಸರಿಯಾಗಿ ಮಾವಿನ ಕಾಯಿಯನ್ನು ತೊಳೆದು ಒರೆಸಿಕೊಳ್ಳಿ. ನಂತರ ಸಿಪ್ಪೆ ತೆಗೆದು ಸ್ಲೈಸ್‌ ಮಾಡಿಟ್ಟುಕೊಳ್ಳಿ. ಬೆಳ್ಳುಳ್ಳಿ, ಮೆಣಸು, ಜೀರಿಗೆಯನ್ನು ತೆಂಗಿನೆಣ್ಣೆ ಬಳಸಿ ಹುರಿದಿಟ್ಟುಕೊಳ್ಳಿ. ಮಿಕ್ಸಿ ಜಾರಿಗೆ ಹುರಿದ ಮಸಾಲೆ ಸಹಿತ, ಉಪ್ಪು,ಇಂಗು, ಮಾವಿನ ಕಾಯಿ, ಕಾಯಿತುರಿಯನ್ನು ಹಾಕಿ ಸ್ವಲ್ಪವೇ ನೀರು ಹಾಕಿ ನುಣ್ಣಗೆ ಗಟ್ಟಿಯಾಗಿ ಕಡೆದಕೊಳ್ಳಿ. ಕರಿಬೇವಿನ ಒಗ್ಗರಣೆ ನೀಡಿ. ಬಾಯಲ್ಲಿ ನೀರೂರಿಸುವ ಚಟ್ನಿ ಊಟಕ್ಕೂ ಸೈ…ತಿಂಡಿಯೊಂದಿಗೂ ಸವಿಯಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!