ಪಾಕಿಸ್ತಾನದಲ್ಲಿ ಮೊದಲ ಹಿಂದೂ ಮಹಿಳಾ ಡಿಎಸ್‌ಪಿಯಾಗಿ ಮನೀಶಾ ಅಧಿಕಾರ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದಂತಹ ಪುರುಷ ಪ್ರಧಾನ ದೇಶದಲ್ಲಿ ಮಹಿಳೆಯರು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡುವುದು ಅಪರೂಪ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ಹಿಂದೂ ಮಹಿಳೆಗೆ ಕೆಲಸ ಸಿಗುವುದು ಅದಕ್ಕಿಂತಲೂ ಅಪರೂಪ. ಮನೀಶಾ ರೂಪೇಟಾ ಪಾಕಿಸ್ತಾನದಲ್ಲಿ ಡಿಎಸ್‌ಪಿ ಹುದ್ದೆಗೇರಿದ ಮೊದಲ ಹಿಂದೂ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್‌ನಲ್ಲಿ ಮಧ್ಯಮ ವರ್ಗದ ಹಿಂದೂ ಕುಟುಂಬದಲ್ಲಿ ಜನಿಸಿದ ಮನೀಶಾಗೆ ಬಾಲ್ಯದಿಂದಲೂ ವೈದ್ಯೆ ಆಗಬೇಕೆಂಬ ಆಸೆ ಇತ್ತು. ಆಕೆಯ ಮೂವರೂ ಸಹೋದರಿಯರು ವೈದ್ಯ ವೃತ್ತಿ ಆಯ್ಕೆ ಮಾಡಿಕೊಂಡಿದ್ದಾರೆ. ಕಿರಿಯ ಸಹೋದರ ಕೂಡ ಪ್ರಸ್ತುತ ಡಾಕ್ಟರೇಟ್ ಕೋರ್ಸ್ ಅನ್ನು ಓದುತ್ತಿದ್ದಾರೆ. ಒಂದು ಅಂಕದಲ್ಲಿ ಮೆಡಿಸಿನ್ ಸೀಟ್ ಕಳೆದುಕೊಂಡ ಆಕೆ ಫಿಸಿಕಲ್ ಥೆರಪಿ ಕೋರ್ಸ್ ಮಾಡಲು ನಿರ್ಧರಿಸದ್ದರಂತೆ. ಕೊನೆಗೆ ಸಿಂಧ್ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಪಾಸ್‌ ಆದ್ದರಿಂದ ಸರ್ಕಾರಿ ಕೆಲಸಕ್ಕೆ ಆಯ್ಕೆಯಾದ್ದುದ್ದಾಗಿ ತಿಳಿಸಿದ್ದಾರೆ.

ಹೆಣ್ಣುಮಕ್ಕಳು ಉನ್ನತ ವ್ಯಾಸಂಗ ವೈದ್ಯರು, ಶಿಕ್ಷಕರಾಗಬೇಕು ಎಂದು ಬಾಲ್ಯದಿಂದಲೂ ಅನೇಕರು ನನ್ನ ತಲೆಗೆ ತುಂಬಿದ್ದರು. ಆದರೆ,  ಹೆಚ್ಚಿನ ಮಹಿಳೆಯರು ಪೊಲೀಸ್ ಪಡೆಗೆ ಸೇರುವಂತೆ ನಾನು ಪ್ರೋತ್ಸಾಹಿಸುತ್ತೇನೆ. ಪೊಲೀಸ್ ಅಧಿಕಾರಿಯಾಗಿ ಕೆಲಸ ಮಾಡಲು ಯುಂಬಾ ಉತ್ಸುಕಳಾಗಿದ್ದೇನೆ ಎಂದು ಸದ್ಯ ತರಬೇತಿಯಲ್ಲಿ ಮನೀಶಾ ಅಭಿಪ್ರಾಯ ಹಂಚಿಕೊಂಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!