ಮಂಜಗುಣಿ ಜೆಟ್ಟಿ ವಿಸ್ತರಣೆಗೆ ಆಗ್ರಹಿಸಿ ಸ್ಥಳೀಯರಿಂದ ಮೀನುಗಾರಿಕೆ ಸಚಿವರಿಗೆ ಮನವಿ

ಹೊಸದಿಗಂತ ವರದಿ,ಅಂಕೋಲಾ:

ತಾಲೂಕಿನ ಮಂಜಗುಣಿ ಗ್ರಾಮದ ಬಂದರು ವಿಸ್ತರಣೆಗೆ ಆಗ್ರಹಿಸಿ ಮತ್ತು ಹಿನ್ನೀರು ತಡೆಗೋಡೆ ನಿರ್ಮಾಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಬೋಟ್ ಮಾಲಕ ಹಾಗೂ ಕಾರ್ಮಿಕರ ವತಿಯಿಂದ ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರಿಗೆ ಮನವಿ ಸಲ್ಲಿಸಿದರು.
ಮಂಜಗುಣಿ ಗ್ರಾಮದಲ್ಲಿ ಮೀನುಗಾರಿಕೆ ಮಾಡುವ ಸುಮಾರು ೩೦ ಬೋಟ್‌ಗಳಿವೆ. ಆದರೆ ಇಲ್ಲಿಯ ಬಂದರು ಕಿರಿದಾಗಿರುವುದರಿಂದ ಬೇಲೆಕೇರಿ, ಮುದಗಾ, ಕಾರವಾರ, ತದಡಿ ಹೀಗೆ ಬೇರೆ ಬೇರೆ ಬಂದರುಗಳನ್ನು ಅವಲಂಬಿಸಬೇಕಾಗಿದೆ. ಇದರಿಂದಾಗಿ ೨೦ ರಿಂದ ೩೦ ಕಿ.ಮೀ. ಹೆಚ್ಚುವರಿಯಾಗಿ ಕ್ರಮಿಸಬೇಕಾಗಿದೆ. ಕೆಲವೇ ಬೋಟ್‌ಗಳು ಮಾತ್ರ ಈ ಬಂದರಿಗೆ ಬಂದು ಮೀನು ಖಾಲಿ ಮಾಡುತ್ತವೆ. ಬಂದರು ಪ್ರದೇಶವೂ ಕೂಡ ಕಿರಿದಾಗಿರುವುದರಿಂದ ವಾಹನ ಮುಂದೆ ಹೋಗಲು ಸಾಧ್ಯವಾಗುತ್ತಿಲ್ಲ.
ಮಂಜಗುಣಿಯಲ್ಲಿ ಬಂದರು ವಿಸ್ತರಣೆಯಾದರೆ ಬೋಟ್‌ನವರಿಗೆ ಅನುಕೂಲವಾಗುವುದರ ಜತೆಗೆ ಕಾರ್ಮಿಕರಿಗೆ ಹಾಗೂ ಪ್ರತ್ಯಕ್ಷö್ಯ, ಪರೋಕ್ಷö್ಯವಾಗಿ ನೂರಾರು ಜನರಿಗೆ ಉದ್ಯೋಗ ದೊರೆಯುತ್ತದೆ. ಈಗಾಗಲೇ ೬೦ ಮೀ. ಜಟ್ಟಿ ನಿರ್ಮಾಣ ಮಾಡಿದ್ದು, ಇದು ಎಲ್ಲಿಯೂ ಸಾಲುತ್ತಿಲ್ಲ. ಕನಿಷ್ಠ ೧೫೦ ಮೀ. ತುರ್ತು ವಿಸ್ತರಣೆಯ ಅವಶ್ಯಕತೆಯಿದೆ. ಮಂಜಗುಣಿ-ಗAಗಾವಳಿ ಈ ಎರಡೂ ಊರಿನ ನದಿ ದಂಡೆಯಲ್ಲಿ ಹಿನ್ನೀರು ತಡೆಗೋಡೆ ಮಾಡಿದರೆ ವರ್ಷವಿಡೀ ಮೀನುಗಾರಿಕೆ ಮಾಡಬಹುದು. ಹೀಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಉಪಸ್ಥಿತರಿದ್ದರು. ಮೀನುಗಾರರ ಮುಖಂಡರಾದ ರಾಮಚಂದ್ರ ಯಾದು ತಾಂಡೇಲ, ಪ್ರಕಾಶ ಎನ್. ತಾಂಡೇಲ, ಗಣಪತಿ ಕಾಮು ತಾಂಡೇಲ, ಮಾರುತಿ ಕುಪ್ಪಾ ತಾಂಡೇಲ, ಸುಶಾಂತ ತಾಂಡೇಲ, ನೀಲಕಂಠ ಕಾಮು ತಾಂಡೇಲ, ಗಣಪತಿ ಚೂಡಾಮಣಿ ತಾಂಡೇಲ, ಸಂತೋಷ ಸೋಮ ತಾಂಡೇಲ ಸೇರಿದಂತೆ ಹಲವರು ಉಪಸ್ಥಿತರಿದ್ದು, ತಮ್ಮ ಸಮಸ್ಯೆಯನ್ನು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!