ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Saturday, July 31, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ನಾಮಿನೇಷನ್ ನಿಂದ ಮಂಜು ಪಾವಗಡ ರನ್ನು ಸೇವ್ ಮಾಡಿದ ಕ್ಯಾಪ್ಟನ್ ದಿವ್ಯಾ ಸುರೇಶ್!  

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..

ಹೊಸದಿಗಂತ ಆನ್ ಲೈನ್ ಡೆಸ್ಕ್:

ಬಿಗ್ ಬಾಸ್ ಸೀಸನ್ 8ರ ಈ ವಾರದ ಎಲಿಮಿನೇಷನ್ ಗೆ ನಾಮಿನೇಷನ್ ಪ್ರಕ್ರಿಯೆ ನಡೆದಿದ್ದು, ನಾಮಿನೇಟ್ ಆಗಿದ್ದ ಮಂಜು ಪಾವಗಡರನ್ನು ದಿವ್ಯಾ ಸುರೇಶ್ ಸೇವ್ ಮಾಡಿದ್ದಾರೆ.
ಹೌದು, ಮನೆಯ ಕ್ಯಾಪ್ಟನ್ ದಿವ್ಯಾ ಸುರೇಶ್ ಗೆ ಬಿಗ್ ಬಾಸ್ ನೀಡಿದ್ದ ವಿಶೇಷ ಅಧಿಕಾರದ ಮೂಲಕ ಮಂಜು ಪಾವಗಡ, ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ, ದಿವ್ಯಾ ಉರುಡುಗ ಅವರಲ್ಲಿ ಒಬ್ಬರನ್ನು ಸೇವ್ ಮಾಡಬೇಕಿತ್ತು. ಈ ವೇಳೆ ದಿವ್ಯಾ ಸುರೇಶ್ ಮಂಜು ಅವರ ಹೆಸರನ್ನು ಹೇಳಿ ಅವರನ್ನು ನಾಮಿನೇಷನ್ ನಿಂದ ಬಚಾವ್ ಮಾಡಿದ್ದಾರೆ.
ಎಲಿಮಿನೇಟ್ ಆದ ಪ್ರಿಯಾಂಕಾ ಅವರ ನೇರ ನಾಮಿನೇಷನ್ ನಿಂದ ಚಕ್ರವರ್ತಿ ಚಂದ್ರಚೂಡ್ ಮೊದಲೇ ನಾಮಿನೇಟ್ ಆಗಿದ್ದರಿಂದ ಇವರನ್ನು ಸೇರಿಸಿ ಪಡಿಸಿ ಪ್ರಶಾಂತ್ ಸಂಬರಗಿ, ಶಮಂತ್, ಶುಭಾ ಪೂಂಜಾ, ದಿವ್ಯಾ ಉರುಡಗ ಈ ವಾರ ನಾಮಿನೇಟ್ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss