spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Thursday, September 23, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಿ: ರೈತರಿಗೆ ಮನ್‌ಮುಲ್ ಅಧ್ಯಕ್ಷ ರಾಮಚಂದ್ರ ಸಲಹೆ

- Advertisement -Nitte

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………

ದಿಗಂತ ವರದಿ ಮಂಡ್ಯ:

ರೈತರ ಪಾಲಿಗೆ ಕಾಮಧೇನುಗಳಾಗಿರುವ ಜಾನುವಾರುಗಳಿಗೆ ತಪ್ಪದೇ ವಿಮೆ ಮಾಡಿಸಬೇಕು ಎಂದು ಮನ್‌ಮುಲ್ ಅಧ್ಯಕ್ಷ ಬಿ.ಆರ್.ರಾಮಚಂದ್ರು ರೈತರಿಗೆ ಸಲಹೆ ನೀಡಿದರು.
ತಾಲೂಕಿನ ಹುಲ್ಲುಕೆರೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ನಡೆದ 2021-22ನೇ ಸಾಲಿನ ಜಾನುವಾರುಗಳ ಗುಂಪು ವಿಮಾ ಯೋಜನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜಾನುವಾರುಗಳು ಈಗ ರೈತರ ಕುಟುಂಬದ ಆಧಾರ ಸ್ತಂಭವಾಗಿದೆ ಎಂದು ತಿಳಿಸದರು.
ರೈತರು ತಮ್ಮ ಜಾನುವಾರುಗಳಿಗೆ ವಿಮೆ ಮಾಡಿಸುವುದು ತಮ್ಮ ಮೊದಲ ಆದ್ಯತೆಯಾಗಬೇಕು. ಜೀವನ ನಿರ್ವಹಣೆಗೆ ದಾರಿಯಾಗಿರುವ ರಾಸುಗಳನ್ನು ಬಹಳ ಮುತುವರ್ಜಿಯಿಂದ ಸಾಕಬೇಕು. ಹಾಗಾಗಿ ವಿಮೆ ಮಾಡಿಸಿದಲ್ಲಿ ಕುಟುಂಬಕ್ಕೆ ತೊಂದರೆಯಾಗದು ಎಂದು ತಿಳಿಸಿದರು.
ಜಾನುವಾರುಗಳಿಗೆ ವಿಮೆ ಮಾಡಿಸಬೇಕಾದರೆ ಪಾವತಿಸಬೇಕಾದ ಪ್ರಿಮಿಯಂ ಮೊತ್ತದ ಪೈಕಿ ಒಕ್ಕೂಟ ಶೇ. 75ರಷ್ಟು ಪಾವತಿಸಿದರೆ, ಲಾನುಭವಿ ಶೇ.25ರಷ್ಟು ಪಾವತಿಸಬೇಕು ಎಂದು ತಿಳಿಸಿದರು.
ಮನ್‌ಮುಲ್ ಉಪಾಧ್ಯಕ್ಷ ಎಂ.ಎಸ್. ರಘುನಂದನ್ ಮಾತನಾಡಿ ಹುಲ್ಲುಕೆರೆ ಕೊಪ್ಪಲು ಗ್ರಾಮದ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 55 ಮಂದಿ ಸಕ್ರಿಯ ಹಾಲು ಉತ್ಪಾದಕರಿದ್ದು, ಪ್ರತಿದಿನ ಸಾವಿರದ ಏಳುನೂರು ಲೀಟರ್ ಹಾಲು ಶೇಖರಣೆಯಾಗುತ್ತಿರುವುದು ಸಂಘದ ಅಭಿವೃದ್ಧಿಗೆ ಸಹಕಾರಿಯಾಗಿದೆ ಎಂದರು.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss