ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
……………………………………………………….
ಹೊಸ ದಿಗಂತ ವರದಿ, ಮಂಡ್ಯ :
ಮಂಡ್ಯ ಜಿಲ್ಲಾ ಹಾಲು ಒಕ್ಕೂಟದಲ್ಲಿ ನಡೆದಿರುವ ನೀರು ಮಿಶ್ರಿತ ಹಾಲು ಹಗರಣ ಮುಚ್ಚಿ ಹಾಕುವುದಕ್ಕೆ ಪೊಲೀಸ್ ಅಧಿಕಾರಿಗಳು ಮತ್ತು ಆಡಳಿತ ಮಂಡಳಿ ವ್ಯವಸ್ಥಿತ ಹುನ್ನಾರ ನಡೆಸಿದೆ ಎಂದು ವಕೀಲ ಟಿ.ಎಸ್.ಸತ್ಯಾನಂದ ಆರೋಪಿಸಿದರು.
ಎ್ಐಆರ್ ಹಂತದಲ್ಲೇ ಪ್ರಕರಣಕ್ಕೆ ಜೀವವಿಲ್ಲದಂತೆ ಮಾಡಿ ಆರೋಪಿಗಳನ್ನು ರಕ್ಷಣೆ ಮಾಡುವುದಕ್ಕೆ ಬೇಕಾದ ಎಲ್ಲಾ ರೀತಿಯ ಕಾನೂನಾತ್ಮಕ ಕ್ರಮಗಳನ್ನು ಅನುಸರಿಸಿದ್ದಾರೆ. ಹೀಗಾಗಿ ಸಿಐಡಿಯಿಂದ ಸತ್ಯಾಂಶ ಹೊರಬರಲು ಸಾಧ್ಯವೇ ಇಲ್ಲ. ಏಕೆಂದರೆ, ಪೊಲೀಸರು ಒಮ್ಮೆ ಮಾಡಿರುವ ಎ್ಐಆರ್ನ್ನು ಸಿಐಡಿಯಿಂದ ಬದಲಿಸಲಾಗುವುದಿಲ್ಲ. ಅದಕ್ಕಾಗಿ ವಿಶೇಷ ತನಿಖಾ ತಂಡ ಅಥವಾ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಒತ್ತಾಯಿಸಿದರು.
ನೀರು ಮಿಶ್ರಿತ ಹಾಲು ಹಗರಣ ಘೋರ ಅಪರಾಧ. ಇದರ ತನಿಖೆಯನ್ನು ಹಂಸಕ್ಷೀರ ನ್ಯಾಯದಂತೆ ತನಿಖೆಗೆ ಒಳಪಡಿಸುವ ಬದಲು ರಾಜಕೀಯ ಕೆಸರೆರಚಾಟ, ವಂಚಕರನ್ನು ಕಾನೂನಿನ ಮೂಲಕ ರಕ್ಷಣೆ ಮಾಡುವ ಕಾರ್ಯಕ್ಕೆ ಕೈ ಹಾಕಿರುವುದು ನಾಚಿಕೆಗೇಡಿನ ಸಂಗತಿ ಎಂದು ಟೀಕಿಸಿದರು.