ನಾಳೆ ಮನ್ ಕೀ ಬಾತ್ ನೂರನೇ ಆವೃತ್ತಿ ಪ್ರಸಾರ: ಈ ಕ್ಷಣ ಪ್ರಧಾನಿ ಮೋದಿ ಎಲ್ಲಿರುತ್ತಾರೆ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪ್ರಧಾನಿ ನರೇಂದ್ರ ಮೋದಿಯವರ (Narendra Modi) ಮನ್ ಕೀ ಬಾತ್ (Mann Ki Baat) 100 ನೇ ಸಂಚಿಕೆಯ ಪ್ರಸಾರಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ವಿಶೇಷ ಸಿದ್ಧತೆಗಳನ್ನು ನಡೆಸಿದೆ.

ನೂರನೇ ಸಂಚಿಕೆಯ ಮನ್ ಕೀ ಬಾತ್ ಭಾನುವಾರ ಬೆಳಿಗ್ಗೆ 11 ಗಂಟೆಗೆ ಪ್ರಸಾರವಾಗಲಿದೆ. ಆದರೆ, ಪ್ರಧಾನಿ ಮೋದಿ ಅವರು ಸದ್ಯ ಕರ್ನಾಟಕದಲ್ಲಿ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜೊತೆಗೆ ಭಾನುವಾರವೂ ರಾಜ್ಯದಲ್ಲೇ ಇರಲಿದ್ದಾರೆ. ಹೀಗಾಗಿ ಅವರು ಮನ್ ಕೀ ಬಾತ್​​ನ ನೂರನೇ ಸಂಚಿಕೆ ಕಾರ್ಯಕ್ರಮ ವೀಕ್ಷಣೆ / ಕೇಳಲು ಎಲ್ಲಿರುತ್ತಾರೆ ಎಂಬುದು ಎಲ್ಲರಲ್ಲಿ ಕಾಡಿದ ಪಶ್ನೆಯಾಗಿದೆ.

ಇದೀಗ ಈ ಪಶ್ನೆಗಳಿಗೆ ಉತ್ತರ ಸಿಕ್ಕಿದ್ದು, ರಾಜ್ಯ ಪ್ರವಾಸದಲ್ಲಿರುವ ಮೋದಿ ಇಂದು (ಶನಿವಾರ) ರಾತ್ರಿ ಬೆಂಗಳೂರಿನ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ ಅವರು ಚುನಾವಣಾ ಪ್ರಚಾರಕ್ಕೆ ಹೊರಡುವ ಮೊದಲು ರಾಜಭವನದಲ್ಲೇ ಇದ್ದುಕೊಂಡು ಮನ್ ಕೀ ಬಾತ್​​ನ ನೂರನೇ ಸಂಚಿಕೆ ಪ್ರಸಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನಂತರ ಕೋಲಾರ, ಮೈಸೂರು, ಚನ್ನಪಟ್ಟಣಗಳಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!