ಮನ್ ಕಿ ಬಾತ್ ದೇಶದ ಜನರ ಭಾವನೆ ಅಭಿವ್ಯಕ್ತ ಪಡಿಸುವ ಉತ್ತಮ ವೇದಿಕೆ: ಸಿಎಂ ಬೊಮ್ಮಾಯಿ

ಹೊಸದಿಗಂತ ವರದಿ ಹಾವೇರಿ:

ಮನ್ ಕಿ ಬಾತ್ ದೇಶದ ಜನರ ಭಾವನೆ ಅಭಿವ್ಯಕ್ತ ಪಡಿಸುವ ಉತ್ತಮ ವೇದಿಕೆಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೊಮ್ಮಾಯಿ ಇಂದು ಶಿಗ್ಗಾಂವಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು. ಈ ವೇಳೆ ಮನ್‌ ಕೀ ಬಾತ್‌ ಕುರಿತು ಮಾತನಾಡಿದರು.

ಅಭೂತಪೂರ್ವ ಕಾರ್ಯಕ್ರಮ

ದೇಶದ ಪ್ರತಿ ಮನೆಯಲ್ಲೂ ಮನ್ ಕಿ ಬಾತ್ ಕಾರ್ಯಕ್ರಮ ಕೇಳುತ್ತಾರೆ. ಮನ್ ಕಿ ಬಾತ್ ದೇಶದ ಜನರ ಭಾವನೆಯಾಗಿದೆ. ಜನರ ಸಮಸ್ಯೆ ಕೇಳಿ ಪರಿಹಾರ ಸೂಚಿಸುವ ವೇದಿಕೆಯಾಗಿದೆ. ಹಳ್ಳಿಗಳಲ್ಲಿ, ಸಣ್ಣ ಸಣ್ಣ ಉದ್ಯೋಗ ಮಾಡುವವರನ್ನು ದೇಶಕ್ಕೆ ಪರಿಚಯ ಮಾಡುವ ಕೆಲಸವಾಗುತ್ತಿದೆ. ಇದರಿಂದ ಅನೇಕರು ತಮ್ಮ ಉದ್ಯೋಗ ಬದಲಾಯಿಸಿ ಸ್ವಯಂ ಉದ್ಯೋಗ ಕಂಡು ಕೊಂಡಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮನಸಿನ ಮಾತುಗಳನ್ನು ಹಂಚಿಕೊಳ್ಳಲು ಇಷ್ಟು ದೊಡ್ಡ ವೇದಿಕೆ ಸಿಕ್ಕಾಗ ಇಡೀ ದೇಶಕ್ಕೆ ಸ್ಪೂರ್ತಿಯಾಗುತ್ತದೆ‌ ಎಂದರು. ಸರ್ವರಿಗೂ ಸರ್ವ ವ್ಯಾಪಿಯಾಗಿ ಅಭಿಪ್ರಾಯ ಹಂಚಿಕೊಳ್ಳುವ ವೇದಿಕೆ ಇದಾಗಿದೆ ಎಂದು ತಿಳಿಸಿದರು.

ಪ್ರಧಾನಿಗೆ ಅಭಿನಂದನೆ

ಪ್ರಧಾನಿ ಮೋದಿಯವರು ಮಹಾನ್ ನಾಯಕರಾಗಿದ್ದಾರೆ‌. ಮನ್‌ ಕೀ ಬಾತ್‌ 100ನೆ ಸಂಚಿಕೆ ನಡೆಸಿಕೊಟ್ಟಿರುವುದಕ್ಕೆ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!