Wednesday, July 6, 2022

Latest Posts

ತೆರಿಗೆ ಪಾವತಿ ಮಾಡದ ಮಂತ್ರಿ ಮಾಲ್‌ಗೆ ಮತ್ತೆ ಬೀಗ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಬಿದ್ದಿದೆ.
ಬಿಬಿಎಂಪಿಗೆ ಸುಮಾರು 27 ಕೋಟಿ ರೂ. ತೆರಿಗೆ ಪಾವತಿಸದ ಹಿನ್ನೆಲೆ ಬೀಗ ಹಾಕಲಾಗಿದೆ.
ಮೂರು ವರ್ಷದಿಂದ ಬಿಬಿಎಂಪಿಗೆ ಒಟ್ಟು 27 ಕೋಟಿ.ರೂ ತೆರಿಗೆ ಪಾವತಿಸಬೇಕಿತ್ತು. ಪದೇ ಪದೆ ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಸದ ಹಿನ್ನೆಲೆ ಇದೀಗ ಮತ್ತೆ ಮಂತ್ರಿ ಮಾಲ್‌ಗೆ ಬೀಗ ಹಾಕಲಾಗಿದೆ.

ಬಿಬಿಎಂಪಿ ಪಶ್ಚಿಮ ವಲಯ ಅಧಿಕಾರಿಗಳು ಮಾಲ್‌ಗೆ ಬೀಗ ಹಾಕಿಸಿದ್ದಾರೆ. ಈ ಹಿಂದೆಯೂ ಒಮ್ಮೆ ಮಾಲ್‌ಗೆ ಇದೇ ರೀತಿ ಬೀಗ ಹಾಕಲಾಗಿತ್ತು. ತೆರಿಗೆ ಪಾವತಿಸಲು ಸಮಯ ಕೋರಿ ಐದು ಕೋಟಿ ರೂ. ತೆರಿಗೆ ಪಾವತಿಸಿದ ನಂತರ ಬೀಗ ತೆಗೆಯಲಾಗಿತ್ತು. ಆದರೆ ಸಂಪೂರ್ಣ ತೆರಿಗೆ ಪಾವತಿಗೆ ಬಿಬಿಎಂಪಿ ನೀಡಿದ್ದ ಗಡುವು ಮುಗಿದಿದ್ದು, ಇಂದು ಮತ್ತೆ ಬೀಗ ಹಾಕಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss