ಕಾಸರಗೋಡಿನ ವಿವಿಧೆಡೆ ಭಾರೀ ಮಳೆಗೆ ಅಪಾಯಕ್ಕೆ ಸಿಲುಕಿವೆ ಹಲವು ಮನೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಸರಗೋಡು ಜಿಲ್ಲೆಯಲ್ಲಿ ಮಳೆ ಹಾಗೂ ಹಾನಿ ಜಂಟಿಯಾಗಿ ಮುಂದುವರಿದಿವೆ. ಚಟ್ಟಂಚಾಲ್ ತೆಕ್ಕಿಲ್ ರಸ್ತೆಯ ಟಾಟಾ ಕೋವಿಡ್ ಆಸ್ಪತ್ರೆ ಸಮೀಪದ ರಸ್ತೆ ಅಪಾಯದಲ್ಲಿದ್ದು, ವಾಹನ ಸಂಚಾರ ನಿಷೇಧಿಸಲಾಗಿದೆ. ಪೊಯಿನಾಚಿಯಲ್ಲಿ ಮನೆಯೊಂದು ಅಪಾಯಕ್ಕೆ ಸಿಲುಕಿದ್ದು, ತಂಬಾನ್ ಎಂಬವರ ಮನೆ ಭಾಗಶಃ ಕುಸಿತಕ್ಕೊಳಗಾಗಿದೆ. ಪೊವ್ವಾಲ್ ಪರಿಸರದಲ್ಲಿ ಕೂಡಾ ಮನೆಗಳಿಗೆ ಮಳೆಯಿಂದ ಹಾನಿ ಉಂಟಾಗಿದೆ.

ಕಾಸರಗೋಡು ಸಹಿತ ಕೇರಳದ 11 ಜಿಲ್ಲೆಗಳಲ್ಲಿ ಯೆಲ್ಲೋ ಅಲಟ್೯ ಮುಂದುವರಿದಿದ್ದು, ಜೀವನದಿಗಳು ಉಕ್ಕಿ ಹರಿದು ಜಲ ಗಂಡಾಂತರ ಭೀತಿ ಹುಟ್ಟಿಸಿವೆ. ಯಾವುದೇ ಹೆಚ್ಚಿನ ಅಪಾಯ ಸಂಭವಿಸದಂತೆ ಅಡಳಿತಗಳು ಹದ್ದಿನಕಣ್ಣಿರಿಸಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!